Thursday, May 9, 2024
spot_imgspot_img
spot_imgspot_img

ಬೆಳ್ತಂಗಡಿ: ಉಪನ್ಯಾಸಕರೊಬ್ಬರಿಗೆ ನಗ್ನ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಯುವತಿ!

- Advertisement -G L Acharya panikkar
- Advertisement -

ಬೆಳ್ತಂಗಡಿ: ಉಪನ್ಯಾಸಕರೊಬ್ಬರಿಗೆ ನಗ್ನ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ. ಉಜಿರೆ ಸಮೀಪದ ಉಪನ್ಯಾಸಕರೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಯಾರು ಎತ್ತ ಎಂದು ವಿಚಾರಿಸದೆ ರಿಕ್ವೆಸ್ಟ್ ಆಸೆಪ್ಟ್ ಮಾಡಿದ್ದಾರೆ. ನಂತರ ಸಂಭಾಷಣೆಗೆ ಇಳಿದ ಹುಡುಗಿ ಯಾವುದೋ ಬ್ಯುಸಿನೆಸ್ ಅವಕಾಶ ಇದೆ, ವಿವರ ತಿಳಿಸಲು ವಾಟ್ಸ್ಅಪ್ ನಂಬರ್ ಪಡೆದಿದ್ದಳು.

ಸ್ವಲ್ಪ ಸಮಯದ ನಂತರ ಅವರಿಗೆ ವಿಡಿಯೋ ಕಾಲ್ ಒಂದು ಬಂದಿತ್ತು. ತಮ್ಮ ಕೆಲಸದ ಮಧ್ಯೆ ಅವರು ಕರೆ ಸ್ವೀಕರಿಸಿ ಮತ್ತೆ ಕೆಲವು ಕ್ಷಣಗಳಲ್ಲಿ ಅತ್ತಕಡೆಯಿಂದ ಆ ಹುಡುಗಿ ನಗ್ನಳಾಗಿ ಕಾಣಿಸಿಕೊಂಡಿದ್ದಳು. ಇದೇನಾಗುತ್ತಿದೆ ಎಂದು ಗಾಬರಿಗೊಂಡ ಉಪನ್ಯಾಸಕ ತಕ್ಷಣ ಕರೆ ಮಾಡಿದ್ದಾರೆ. ಆದರೆ ಅಷ್ಟರೊಳಗೆ ಆಕೆ ಮತ್ತವಳ ತಂಡ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದನ್ನು ಅವರ ಭಾವಚಿತ್ರಕ್ಕೆ ಜೋಡಿಸಿ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದರು.

ನಿಮ್ಮ ಈ ನಗ್ನ ಹುಡುಗಿಯ ಜೊತೆಗಿನ ಫೋಟೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದೆ ಅಪ್ಲೋಡ್ ನಿಲ್ಲಿಸಲು 5500 ರೂಪಾಯಿ ಚಾರ್ಜ್ ಆಗುತ್ತದೆ ಎಂದು ಬ್ಲಾಕ್ಮೇಲ್ ಮಾಡಿದ್ದಾರೆ ಈ ವಿಷಯ ತಿಳಿಸಿದರೆ ನಿಮ್ಮ ಅಪ್ಪ – ಅಮ್ಮ ಸತ್ತುಹೋಗುತ್ತಾರೆ ನಿನ್ನ ಕುಟುಂಬದವರು ಫಿನಿಷ್. ದುಡ್ಡು ಹಾಕಿ ಅನಂತರ ಮತ್ತೆ ಕಾಲ್ ಮಾಡುತ್ತೇನೆ ಎಂದಿದ್ದಾರೆ. ಆದರೆ ಇದಕ್ಕೆ ಅಂಜದ ಉಪನ್ಯಾಸಕ ಹಣ ಕೊಡುವುದಿಲ್ಲ ಎಂದು ನಿರ್ಧರಿಸಿದ್ದು ಇದೊಂದು ಶ್ಲಾಘನಾರ್ಹ ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!