Saturday, August 8, 2026
spot_imgspot_img
spot_imgspot_img

ಬೆಳ್ತಂಗಡಿ: ಇಂದು ಬೆಳಗ್ಗೆ ಗಡಾಯಿಕಲ್ಲಿನಲ್ಲಿ ಮತ್ತೆ ಭಾರೀ ಸ್ಫೋಟ!

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇಂದು ಬೆಳಗ್ಗೆ ಮತ್ತೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ ಎಂದು ನಡ ಗ್ರಾ.ಪಂ ಮಾಜಿ ಸದಸ್ಯ ಶ್ಯಾಮಸುಂದರ್ ನಡ ತಿಳಿಸಿದ್ದಾರೆ.

ಕಳೆದ ಮೇ.2ರಂದು ಕೂಡ ಗಡಾಯಿಕಲ್ಲು ಮೇಲೆ ಭಾರೀ ಸ್ಫೋಟದೊಂದಿಗೆ ಬಂಡೆ ಜಾರಿ ಬಿದ್ದಿದ್ದರಿಂದ ಸುತ್ತಲಿನ ಪ್ರದೇಶದಲ್ಲಿ ಪೂತಿ೯ ಧೂಳು ಆವರಿಸಿಕೊಂಡು ಸ್ಫೋಟ ಸುಮಾರು 1 ಕಿ.ಮೀಗೂ ಹೆಚ್ಚು ದೂರ ಕೇಳಿಸಿತ್ತು.

ಇದೀಗ ಆ ಘಟನೆ ಇಂದು ಬೆಳಿಗ್ಗೆ ಕೂಡಾ ಮರುಕಳಿಸಿದ್ದು, ದೊಡ್ಡ ಶಬ್ದದೊಂದಿಗೆ ಅದೇ ಜಾಗದಲ್ಲಿ ಬಂಡೆ ಜಾರಿ ಕೆಳಗೆ ಬಿದ್ದಿರುವುದು ಸ್ಥಳೀಯರಿಗೆ ಕಾಣಿಸಿದೆ.

- Advertisement -

Related news

error: Content is protected !!