Sunday, June 16, 2024
spot_imgspot_img
spot_imgspot_img

ಬೆಳ್ತಂಗಡಿ: ಎರಡು ಮನೆಗಳಿಂದ ಚಿನ್ನಾಭರಣ ಕಳವು..!

- Advertisement -G L Acharya panikkar
- Advertisement -

ಬೆಳ್ತಂಗಡಿ: ಮನೆಯ ಬಾಗಿಲು ಮುರಿದು, ಎರಡು ಮನೆಗಳಲ್ಲಿ ಕಳ್ಳತನ ನಡೆಸಿರುವ ಘಟನೆ ತೆಂಕಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ನಡೆದಿದೆ.

ತೆಂಕಕಾರಂದೂರು ಗ್ರಾಮದ ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಹಾಗೂ ಮುಂಡೆಲ್ ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ವೃದ್ಧೆ ಪ್ರೇಮ ಶೆಟ್ಟಿ ತಮ್ಮ ಮನೆಯಲ್ಲಿ ಮಗನೊಂದಿಗೆ ಇದ್ದಾಗ ತಡರಾತ್ರಿ ಹಿಂಬದಿ ಬಾಗಿಲು ಒಡೆದು ರೂಮ್ ನಲ್ಲಿರುವ ಕಪಾಟು ಹೊಡೆದು ಸುಮಾರು 20 ಪವನ್ ಚಿನ್ನ, ಇತರ ದಾಖಲೆಗಳ ಬ್ಯಾಗನ್ನೇ ಎಗರಿಸಿ ಪರಾರಿಯಾಗಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕದ್ದಿದ್ದು, ಮನೆಮಂದಿಗೆ ಎಚ್ಚರವಾಗಿರಲಿಲ್ಲ.

ಪ್ರೇಮಾ ಅವರ ಮನೆಯಿಂದ ಕೇವಲ 200 ಮೀಟರ್ ಸಮೀಪದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿಯವರ ಮನೆಯಲ್ಲೂ ಕಳ್ಳತನ ನಡೆಸಲಾಗಿದೆ. ಮನೆಯವರ ಸಂಬಂಧಿಕರ ಮನೆಯಲ್ಲಿ ಕೋಲ ಇರುವ ಕಾರಣ ಸಂಜೆ ತೆರಳಿದ್ದು ಮನೆಯ ಬಾಗಿಲು ಒಡೆದು 4 ಪವನ್ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವೇಣೂರು ಠಾಣೆ ಉಪನಿರೀಕ್ಷಕ ಶ್ರೀಶೈಲ ಅವರ ತಂಡ ಆಗಮಿಸಿ ತನಿಖೆ ಮುಂದುವರೆಸಿದೆ.

- Advertisement -

Related news

error: Content is protected !!