Tuesday, April 30, 2024
spot_imgspot_img
spot_imgspot_img

ಸುಳ್ಯ: ಅಕ್ರಮವಾಗಿ ಮರ ಕಡಿದು ದಿಮ್ಮಿ ಸಾಗಾಟ ಯತ್ನ : ಲಾರಿ, ಕ್ರೇನ್ ಸಹಿತ ನಾಲ್ಕು ಮಂದಿ ಅರೆಸ್ಟ್‌

- Advertisement -G L Acharya panikkar
- Advertisement -

ಸುಳ್ಯ : ಅಕ್ರಮವಾಗಿ ಮರಗಳನ್ನು ಕಡಿದು, ದಿಮ್ಮಿ ಸಾಗಾಟ ಮಾಡಲು ಯತ್ನಿಸಿದ ಘಟನೆ ಸುಳ್ಯ ಕಸಬಾ ಗ್ರಾಮದ ಶಾಂತಿ ನಗರದಲ್ಲಿ ನಡೆದಿದೆ.

ಶಾಂತಿನಗರದ ವೆಂಕಪ್ಪ ನಾಯ್ಕರ ಜಮೀನುನಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ವೇಳೆ ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಅಕ್ರಮ ಸಾಗಾಟಕ್ಕೆ ಬಳಸಲಾದ 1 ಲಾರಿ, 1ಕ್ರೇನ್, ಹಾಗೂ 7.946 ಘ. ಮೀ. ಮರದ ದಿಮ್ಮಿ‌ಹಾಗೂ ಪ್ರಕರಣದ ಆರೋಪಿಗಳಾದ ಸ್ಥಳದ ಮಾಲಿಕ ಕೆ. ಕೃಷ್ಣಪ್ಪ ನಾಯ್ಕ ಶಾಂತಿನಗ, ಮರದ ವ್ಯಾಪಾರಿ ರಿಫಾಯಿ ಹಳೆಗೇಟು, ಕ್ರೇನ್ ಚಾಲಕ ಗೋಪಾಲಕೃಷ್ಣ ಜಯನಗರ, ಲಾರಿ ಚಾಲಕ ಜಗದೀಶ್ ಶಾಂತಿ ಗ್ರಾಮ, ಹಾಸನ ಇವರನ್ನು ಬಂಧಿಸಿದ್ದಾರೆ.

ವಶಕ್ಕೆ ಪಡೆದುಕೊಂಡ ವಾಹನ ಮತ್ತು ಸೊತ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸೌಮ್ಯ. ಪಿ. ಎನ್, ರಾಘವೇಂದ್ರ ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಗೀತಾ, ಪುಷ್ಪಾವತಿ, ನಿಂಗಪ್ಪ ಕೊಪ್ಪ, ವಾಹನ ಚಾಲಕ ಪುರುಷೋತ್ತಮ್ ಭಾಗವಹಿಸಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಟೋನಿ ಎಸ್ ಮರಿಯಪ್ಪ ರವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಎನ್. ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!