Sunday, May 5, 2024
spot_imgspot_img
spot_imgspot_img

ಬೆಳ್ತಂಗಡಿ: ಕೊರಗಜ್ಜನಿಗೂ ಕಾಡಿದ ಜಮೀನು ವಿವಾದ; ಗುಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿ

- Advertisement -G L Acharya panikkar
- Advertisement -

ಬೆಳ್ತಂಗಡಿ: ಲಕ್ಷಾಂತರ ಭಕ್ತರು ಆರಾಧಿಸುವ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ಈ ಘಟನೆ ನಡೆದಿದೆ. ಭೂ ವಿಚಾರಕ್ಕೆ ಗಲಾಟೆ ನಡೆದಿದ್ದು, ಅಂತಿಮವಾಗಿ ಭೂಮಿಯ ಮಾಲೀಕ ಕೊರಗಜ್ಜನ ಗುಡಿಗೆ ಬೆಂಕಿ ಹಚ್ಚಿದ್ದಾನೆ.

ಬಾಡಾರಿನ ಜಾಗದಲ್ಲಿ ಸಾರ್ವಜನಿಕರು ಸಮಿತಿಯೊಂದನ್ನು ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಾ ಬರುತ್ತಿದ್ದಾರೆ. ಆದರೆ ಈ ಬಾರಿ ವ್ಯಕ್ತಿಯೋರ್ವ ಗುಡಿ ಇರುವ ಜಾಗದ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಹೀಗಾಗಿ ಸಾರ್ವಜನಿಕರು ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದಲೇ ಕೊರಗಜ್ಜ ಆರಾಧನಾ ಸಮಿತಿ ಮತ್ತು ಈ ಖಾಸಗಿ ವ್ಯಕ್ತಿ ನಡುವೆ ಜಾಗದ ವಿಚಾರಕ್ಕೆ ತಗಾದೆ ಕಂಡುಬರುತ್ತಿತ್ತು. ಇದೀಗ ಕೊರಗಜ್ಜನ ಆರಾಧನೆಗೆ ಸಿದ್ಧತೆಗಳು ಆರಂಭವಾದ ನಡುವೆಯೇ ಈ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ.

ಸ್ವಾಮಿ ಕೊರಗಜ್ಜ ಸಮಿತಿಯಿಂದ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸ್ವಾಮಿ ಕೊರಗಜ್ಜ ಸಮಿತಿ ಬೆಂಕಿ ಹಚ್ಚಿದವನ ವಿರುದ್ಧ ಕ್ರಮ ಕೈಗೊಳ್ಳಬೇಕು, ಅದೇ ಜಾಗದಲ್ಲಿ ಆರಾಧನೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದೆ.

- Advertisement -

Related news

error: Content is protected !!