Tuesday, June 23, 2026
spot_imgspot_img
spot_imgspot_img

ಬೆಳ್ತಂಗಡಿ: ಹೃದಯಾಘಾತದಿಂದ ವ್ಯಕ್ತಿ ಮೃತ್ಯು..!

- Advertisement -
- Advertisement -

ಬೆಳ್ತಂಗಡಿ: ಕ್ಷೌರ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಕ್ಷೌರಿಕ ಸಾವನ್ನಪ್ಪಿರುವ ಘಟನೆ ಉಜಿರೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಮುಂಡಾಜೆ ಗ್ರಾಮದ ಸೋಮಂತಡ್ಕ ನಿವಾಸಿ, ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದ ರಾಧಾಕೃಷ್ಣ ಭಂಡಾರಿ (49) ಎಂದು ಗುರುತಿಸಲಾಗಿದೆ.

ರಾಧಾಕೃಷ್ಣ ಭಂಡಾರಿ ಕೆಲವು ವರ್ಷಗಳಿಂದ ಆರ್.ಕೆ. ಸೆಲೂನ್ ಸ್ವಂತ ಅಂಗಡಿ ಹೊಂದಿ ಅಲ್ಲಿ ತಮ್ಮ ವೃತ್ತಿ ಮಾಡುತ್ತಿದ್ದರು. ಜತೆಗೆ ಉಜಿರೆ ಪೇಟೆಯಲ್ಲಿ ಆರ್.ಕೆ. ಬೇಕರಿ ಕೂಡ ಹೊಂದಿದ್ದರು. ನಿನ್ನೆ ಕ್ಷೌರ ಮಾಡುತ್ತಿರುವಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ರಾಧಾಕೃಷ್ಣ ಉಜಿರೆ ಸೂರ್ಯ ರಸ್ತೆಯಲ್ಲಿ ನೂತನ ಮನೆ ನಿರ್ಮಿಸಿದ್ದು, ತಿಂಗಳ ಹಿಂದಷ್ಟೇ ಅದ್ದೂರಿಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು.

- Advertisement -

Related news

error: Content is protected !!