Monday, January 20, 2025
spot_imgspot_img
spot_imgspot_img

ಹೆತ್ತು ಹೊತ್ತ ತಾಯಿಯನ್ನ ಎತ್ತಿ ಬಿಸಾಕಿ ಮೃಗೀಯ ವರ್ತನೆ. ಆರೋಪಿಗಳ ಬಂಧನ..!

- Advertisement -
- Advertisement -

ಬೆಳ್ತಂಗಡಿ:-ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ. ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬರಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಮಲಗಿದಲ್ಲೇ ಇರುವ ಅಪ್ಪಿ ಶೆಟ್ಟಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ.ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ‌ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ.ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು,ಇದರಿಂದ ನೊಂದ ಅಸಹಾಯಕ‌ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಆರೋಪಿ ಮಗ ಮತ್ತು ಮೊಮ್ಮಕ್ಕಳಿಬ್ಬರ ಬಂಧನವಾಗಿದೆ. ಮಗ ಶ್ರೀನಿವಾಸ ಶೆಟ್ಟಿ, ಮೊಮ್ಮಗ ಪ್ರದೀಪ್ ಶೆಟ್ಟಿ‌ ಹಾಗೂ ಇನ್ನೋರ್ವ ಮೊಮ್ಮಗನ ಬಂಧನವಾಗಿದೆ.ಆರೋಪಿಗಳ ವಿರುದ್ಧ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ‌ ಹಾಗೂ ಹಲ್ಲೆ ಪ್ರಕರಣ ದಾಖಲು ಮಾಡಲಾಗಿದೆ. ವೃದ್ಧೆಯನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಬೆಳ್ತಂಗಡಿ ಪೋಲೀಸರಿಂದ ಪ್ರಕರಣ‌ ದಾಖಲು ಮಾಡಲಾಗಿದೆ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಘಟನೆ ಯನ್ನು ಖಂಡಿಸಿ ,ಹೆಚ್ಚಿನ ತನಿಖೆ ಆಗ್ರಹಿಸಿದಾರೆ.

- Advertisement -

Related news

error: Content is protected !!