Wednesday, June 17, 2026
spot_imgspot_img
spot_imgspot_img

ಬೆಳ್ತಂಗಡಿ ತಂದೆಯನ್ನೇ ಕೊಲೆಗೈದಿದ್ದ ಮಗ ಕೊನೆಗೂ ಬಂಧನ.!

- Advertisement -
- Advertisement -

ಬೆಳ್ತಂಗಡಿ: ತಂದೆಯನ್ನೇ ಮಾರಕಾಸ್ತ್ರಗಳಿಂದ ಹಲ್ಲೆಗೈದು ಮಾಡಿದ್ದ ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 24ರಂದು ವಾಸು ಸಪಲ್ಯ(66) ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ(32) ನಾಪತ್ತೆಯಾಗಿದ್ದು, ಮೊಬೈಲ್ ಫೋನ್​ ಸ್ವಿಚ್ ಅಫ್ ಆಗಿತ್ತು. ಹೀಗಾಗಿ ಆತನೇ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು.

ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆಗಸ್ಟ್ 26ರ (ಬುಧವಾರ) ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಬಂಧಿಸಿದ್ದಾರೆ.

- Advertisement -

Related news

error: Content is protected !!