- Advertisement -
- Advertisement -
ಬೆಳ್ತಂಗಡಿ:-ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಪುಣಿತ್ತಡಿ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ನಿಧಿ ಇದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್, ಪೊಲೀಸ್ ಇಲಾಖೆ ಸಮ್ಮುಖ ಶೋಧ ಕಾರ್ಯ ನಡೆದು, ವದಂತಿಗೆ ತೆರೆ ಎಳೆಯಲಾಯಿತು.ಆನಂದ್ ಶೆಟ್ಟಿ ಎಂಬವರಿಗೆ ಸೇರಿದ ಗದ್ದೆಯಲ್ಲಿ ಇತ್ತಿಚೇಗೆ ಕೊಳವೆ ಬಾವಿ ಕೊರೆಯಿಸಿದ್ದರು.ಕೊಳವೆ ಬಾವಿಗೆ ಪಂಪ್ ಇಳಿಸಿ ಪೈಪ್‌ಲೈನ್ ಮಾಡುವ ವೇಳೆ ಪಕ್ಕದವರ ಗಡಿ ಇರುವ ಜಾಗಕ್ಕೆ ತಾಗಿಕೊಂಡು ಅಂದಾಜು 5-6 ಅಡಿಯ ಹೊಂಡ ಗೋಚರಿಸಿತ್ತು.


ಆದರೆ ಯಾರೋ ಈ ಹೊಂಡದ ಕುರಿತು ವಿಡಿಯೋವನ್ನು ಮಾಡಿ ಪುತ್ತೂರು ಉಪವಿಭಾಗ ಅಧಿಕಾರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಗಮನಕ್ಕೆ ತರಲಾಗಿತ್ತು. ಬುಧವಾರ ತಹಸೀಲ್ದಾರ್ ಮಹೇಶ್ ಜೆ. ಹಾಗೂ ಪಿಎಸ್‌ಐ ನಂದಕುಮಾರ್ ಸಮಕ್ಷಮದಲ್ಲಿ ಸ್ಥಳ ಅಗೆದು ಪರಿಶೀಲನೆ ನಡೆಸಲಾಯಿತು.ಸುಮಾರು 10 ಅಡಿಯಷ್ಟು ಮಣ್ಣು ತೆರವು ಮಾಡಿದರೂ ನಿಧಿ ಗೋಚರಿಸಲೇ ಇಲ್ಲ. ಕೊನೆಗೂ ವದಂತಿಗೆ ತೆರೆ ಎಳೆಯಲಾಯಿತು.

- Advertisement -