



ಬೆಳ್ತಂಗಡಿ: ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ಉಪ್ಪಿನಂಗಡಿ ಪೊಲೀಸ್ ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪಿಲಿಕೂಡೇಲು ಎಂಬಲ್ಲಿ ನಡೆದಿದೆ.
ಅಕ್ರಮವಾಗಿ ಮರಳುಗಾರಿಕೆ ಮಾಡಿತ್ತಿದ್ದವರನ್ನು ಚಿತ್ರ ಕುಮಾರ್ ಮತ್ತು ಧನಂಜಯ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪಿಲಿಕೂಡೇಲು ಎಂಬಲ್ಲಿ ನೇತ್ರಾವತಿ ನದಿಯ ತಡದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದಾಗ, ಅವಿನಾಶ್ ಹೆಚ್. ಪೊಲೀಸ್ ಉಪ ನಿರೀಕ್ಷಕರು (ಕಾ.ಸು) ಉಪ್ಪಿನಂಗಡಿ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿರುತ್ತಾರೆ. ದಾಳಿಯ ವೇಳೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಇಬ್ಬರು ಓಡಿ ತಪ್ಪಿಸಿಕೊಂಡಿದ್ದು, ಅವರುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ, ಓಡಿಹೋದ ವ್ಯಕ್ತಿಗಳು ಚಿತ್ರ ಕುಮಾರ್ ಮತ್ತು ಧನಂಜಯ ಎಂಬುದಾಗಿ ತಿಳಿದು ಬಂದಿರುತ್ತದೆ.
ಯಾವುದೇ ಪರವಾನಿಗೆ ಪಡೆಯದೇ ಹೊಳೆಯಿಂದ ಮರಳನ್ನು ಕಳವು ಮಾಡುತ್ತಿದ್ದ ಬಗ್ಗೆ ಸದ್ರಿ ಆರೋಪಿಗಳ ವಿರುದ್ಧ ಹಾಗೂ ಸದ್ರಿ ಕಳವು ಮಾಡಿದ ಮರಳನ್ನು ಆನಂದ ನಾಯ್ಕ ಎಂಬವರ ಜಾಗದಲ್ಲಿ ಶೇಖರಿಸಿರುವ ಹಿನ್ನೆಲೆಯಲ್ಲಿ, ಆನಂದ ನಾಯ್ಕರವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 44/2024, ಕಲಂ: 379 ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಿಸಿದ್ದು, ಸ್ಥಳದಲ್ಲಿ ದೊರೆತ ಮರಳನ್ನು ಕಳವು ಮಾಡಲು ಉಯೋಗಿಸಿದ ಪ್ಲಾಸ್ಟಿಕ್ ಬುಟ್ಟಿಗಳು, ಹಾರೆಗಳು ಹಾಗೂ ಕಳವು ಮಾಡಿ ರಾಶಿ ಹಾಕಿದ ಒಟ್ಟು ಸುಮಾರು 12,200/- ರೂ ಮೌಲ್ಯದ ಮರಳನ್ನು ಸ್ವಾಧೀನಪಡಿಸಿ, ತನಿಖೆ ನಡೆಸಲಾಗುತ್ತಿದೆ.