Saturday, June 6, 2026
spot_imgspot_img
spot_imgspot_img

ಬೆಳ್ತಂಗಡಿ: ಸಂಚರಿಸುತ್ತಿದ್ದ ಆಟೋದಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ..!!

- Advertisement -
- Advertisement -
vtv vitla

ಬೆಳ್ತಂಗಡಿ : ಸಂಚರಿಸುತ್ತಿದ್ದ ಆಟೋದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಪರಿಚಿತನಾದ ಕರೀಂ ಎಂಬಾತ ಆಟೋ ನಿಲ್ಲಿಸಿ ಹತ್ತಿಸಿದ್ದಾನೆ. ಬಳಿಕ ಆಟೋ ಸಂಚರಿಸುತ್ತಿರುವಾಗ ಬಾಲಕಿಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಈ ಸಂದರ್ಭ ಹೆದರಿದ ಬಾಲಕಿ ರಿಕ್ಷಾದಿಂದ ಹಾರಿದ್ದು ಗಾಯಗೊಂಡಿದ್ದಾಳೆ.

ಬಾಲಕಿ ರಸ್ತೆ ಬಿದ್ದು ನರಳಾಡುತ್ತಿರುವುದನ್ನು ಗಮನಿಸಿಯೂ ನಿಲ್ಲಿಸದೇ ಪರಾರಿಯಾಗಿದ್ದಾರೆ. ಈ ಸಂದರ್ಭ ಆ ರಸ್ತೆಯಲ್ಲಿ ಬರುತ್ತಿದ್ದ ವ್ಯಕ್ತಿ ಬಾಲಕಿಯನ್ನು ಉಪಚರಿಸಿ ಅವರ ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾರೆ. ಬಳಿಕ ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅರೋಪಿ ಕರೀಂ ಮತ್ತು ಆಟೋ ಚಾಲಕನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!