- Advertisement -
- Advertisement -




ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯು ಜ.14 ರಿಂದ ಜ.22 ರ ವರೆಗೆ ನಡೆಯಲಿದ್ದು, ವರ್ಷಂಪ್ರತಿ ನಡೆಯುವ ಈ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ದಿನಾಂಕ 14-01-2026 ನೇ ಬುಧವಾರ ಬೆಳಿಗ್ಗೆ 10 ಕ್ಕೆ ಧ್ವಜಾರೋಹಣ, ಸಂಜೆ 6 ಗಂಟೆಗೆ ಅರಸು ಮುಂಡಾಲ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ, ರಾತ್ರಿ 8.30ಕ್ಕೆ ಲಕ್ಷದೀಪೋತ್ಸವ, ಉತ್ಸವ ಬಲಿ, ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ ನಡೆಯಲಿದೆ.
ಬಿಲ್ಲವ ಸಂಘ (ರಿ) ವಿಟ್ಲ ಮತ್ತು ಮಹಿಳಾ ಬಿಲ್ಲವ ಘಟಕ ಹಾಗೂ ಯುವಾಹಿನಿ (ರಿ) ವಿಟ್ಲ ಘಟಕ ಶಿವಗಿರಿ ಪೊನೊಟ್ಟು ಇವರ ಪ್ರಯೋಜಕತ್ವದಲ್ಲಿ, 6.30ರಿಂದ 8 ಘಂಟೆಯವರೆಗೆ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಡ್ಕ ಉಕ್ಕುಡ ಇವರಿಂದ “ಗಾನ -ನಾಟ್ಯ- ವೈಭವ” ಹಾಗೂ ರಾತ್ರಿ 8 ಘಂಟೆಯಿಂದ ಕಾಪು ರಂಗತರಂಗ ಕಲಾವಿದರ ಸಾಮಾಜಿಕ ಹಾಸ್ಯಮಯ ನಾಟಕ ”ಶೋಬಾಜಿ” ಪ್ರದರ್ಶನಗೊಳ್ಳಲಿದೆ.
- Advertisement -








