Monday, July 27, 2026
spot_imgspot_img
spot_imgspot_img

ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣ: ಬೆಳ್ತಂಗಡಿಯಿಂದ ದುಬೈಗೆ? ಜಲೀಲ್ ಬಾಬಾ ಎಸ್ಕೇಪ್!

- Advertisement -
- Advertisement -

ಬೆಳ್ತಂಗಡಿ : ಬಾಗಲಕೋಟೆಯಲ್ಲಿ ಐದೂವರೇ ಕೋಟಿ ಮಾದಕ ವಸ್ತು ಪತ್ತೆ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರ ತನಿಖೆಯಲ್ಲಿ ನಾಲ್ಕನೇ ಆರೋಪಿಯಾಗಿ ಆ್ಯಂಬುಲೆನ್ಸ್ ನಲ್ಲಿ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಬೆಳ್ತಂಗಡಿಯ ಜಲೀಲ್ @ ಬಾಬಾ(42) ಇದೀಗ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿ ಅಡಗಿಕುಳಿತಿದ್ದಾನೆ ಎನ್ನಲಾಗಿದೆ.

ಬೆಳ್ತಂಗಡಿ ತಾಲೂಕಿನಿಂದ ಕಳೆದ 8 ದಿನಗಳಿಂದ ಮಂಗಳೂರು ಸಿಸಿಬಿ ಪೊಲೀಸರ ಬಂಧನದ ಭೀತಿಯಿಂದ ಎರಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವ ಮಧ್ಯೆ ತನ್ನ ಗೆಳೆಯರ ಸಹಾಯದಿಂದ ಜು.25 ರಂದು ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈ ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

- Advertisement -

Related news

error: Content is protected !!