Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ಸೌದಿ ಅರೆೇಬಿಯಾದಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿ ಹೃದಯಾಘಾತದಿಂದ ನಿಧನ..!

- Advertisement -
- Advertisement -

ಬೆಳ್ತಂಗಡಿ: ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ನಿವಾಸಿಯೋರ್ವರು ಹೃದಯಾಘಾತದಿಂದ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಸಂಜಯನಗರ ನಿವಾಸಿ ಹಿದಾಯತ್ ಎಂದು ಗುರುತಿಸಲಾಗಿದೆ.

ಹಿದಾಯತ್ ಶುಕ್ರವಾರ ಊರಿಗೆ ಬರುವರಿದ್ದರು, ಈ ಹಿನ್ನಲೆ ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅಷ್ಟರಲ್ಲೇ ಅವರು ಸಾವನಪ್ಪಿದ್ದರು. ಹಿದಾಯತ್ ಮೊದಲು ಉದ್ಯೋಗ ನಿಮಿತ್ತ ಬಹರೈನ್‌‌ಗೆ ತೆರಳಿದ್ದವರು ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿ ಕಾರ್ಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!