Monday, June 8, 2026
spot_imgspot_img
spot_imgspot_img

ಉಡುಪಿ: ಆಕಸ್ಮಿಕವಾಗಿ ಕಾಲುಸಂಕದಿಂದ ತೋಡಿಗೆ ಬಿದ್ದು ವ್ಯಕ್ತಿ ಮೃತ್ಯು..!!

- Advertisement -
- Advertisement -

ಉಡುಪಿ: ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲುಸಂಕದಿಂದ ತೋಡಿಗೆ ಜಾರಿ ಬಿದ್ದು ಸಾವನಪ್ಪಿದ ಘಟನೆ ಉಡುಪಿ ಮಠದಬೆಟ್ಟುವಿನಲ್ಲಿ ನಡೆದಿದೆ.

ಮೃತನನ್ನು ಬೈಂದೂರು ಮೂಲದ ನಿವಾಸಿ ಸತೀಶ್ (33)ಎಂದು ಗುರುತಿಸಲಾಗಿದೆ. ಈತ ಉಡುಪಿಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ. ಗುರುವಾರ ಮಧ್ಯಾಹ್ನದ ಸುಮಾರಿಗೆ ಮಠದಬೆಟ್ಟು ತೋಡಿನಲ್ಲಿ ಸತೀಶ್ ಮೃತದೇಹ ಪತ್ತೆಯಾಗಿದೆ. ಸತೀಶ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು,ಒಂದು ಮಗು ಇದೆ ಎಂದು ತಿಳಿಬಂದಿದೆ.

- Advertisement -

Related news

error: Content is protected !!