- Advertisement -
- Advertisement -







ಬೆಳ್ತಂಗಡಿ: ಭಾರೀ ಮಳೆ ಸುರಿಯುತ್ತಿದ್ದು ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ದಂಪತಿ ಗಾಯಗೊಂಡ ಘಟನೆ ಕುಕ್ಕಾವು ಕೊಪ್ಪದ ಗಂಡಿ ಸಮೀಪ ನಡೆದಿದೆ.
ಗಾಯಗೊಂಡಿದ್ದ ದಂಪತಿಗಳನ್ನು ಕಡಿರುದ್ಯವಾರ ಗ್ರಾಮದ ಎರ್ಮಾಲ ಪಲ್ಕೆ ನಿವಾಸಿಗಳಾದ ಗುಮ್ಮಣ್ಣ ಮತ್ತು ವಿಮಲಾ ಎಂದು ಗುರುತಿಸಲಾಗಿದೆ.
ಸ್ಥಳೀಯರ ಸಹಕಾರದಿಂದ ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡ ಮರವೇ ಸ್ಕೂಟರ್ ಮೇಲೆ ಬಿದ್ದಿದ್ದು ಅದೃಷ್ಟವಶಾತ್ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
- Advertisement -








