Tuesday, September 29, 2026
spot_imgspot_img
spot_imgspot_img

ಬೆಳ್ತಂಗಡಿ: ನದಿಯಲ್ಲಿ ಈಜಲು ಹೋದ ಹುಡುಗ ನೀರು ಪಾಲು

- Advertisement -
- Advertisement -

ಬೆಳ್ತಂಗಡಿ: ಕಳೆಂಜ ಗ್ರಾಮದ ಮಾನಿಂಗೆರಿ ಕೂಟೇಲು ಎಂಬಲ್ಲಿ ನದಿಯಲ್ಲಿ ಈಜಲು ಹೋದ ಹುಡುಗ ನೀರು ಪಾಲಾಗಿದ್ದಾನೆ.

ಶಿಬಿನ್ ಎಂಬ 19 ವರ್ಷದ ಹುಡುಗ ತನ್ನ ನೆಂಟರ ಮನೆಗೆ ಬಂದಿದ್ದ. ಆತನ ಸ್ವಂತ ಊರು ಕೊಯ್ಯೂರು. ಹಾಗೆ ಬಂದವನು ನೆಂಟರ ನಾಲ್ಕು ಜನ ಮನೆಯವರ ಜೊತೆ ಅಲ್ಲಿನ ನೆರಿಯ ನದಿಗೆ ಈಜು ಹೊಡೆಯಲು ಹೋಗಿದ್ದರು. ಆ ಸಂದರ್ಭ ಆತ ನೀರಿನ ಸೆಳೆತಕ್ಕೆ ಸಿಕ್ಕಿದ್ದಾನೆ.

ನೀರಿನ ಸೆಳೆತ ಆತನನ್ನು 50 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿತ್ತು. ಜೊತೆಗಿದ್ದ ಈಜ ಬಲ್ಲ ಹುಡುಗರು ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಇದೀಗ ಆತನ ಮೃತದೇಹ ದೊರಕಿದ್ದು, ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!