Friday, July 24, 2026
spot_imgspot_img
spot_imgspot_img

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ಸುಜಿತ್ ಬಳ್ಳಾರಿಯಲ್ಲಿ ನೇಣಿಗೆ ಶರಣು

- Advertisement -
- Advertisement -

ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ರವಿಚಂದ್ರ ಪೂಜಾರಿಯವರ ಪುತ್ರ,‌ ಜಿಂದಾಲ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಸುಜಿತ್ (23) ಬಳ್ಳಾರಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಅಲ್ಲಿನ ಗೆಳೆಯರು ಊರಿಗೆ ಕರೆ ಮಾಡಿ ತಿಳಿಸಿದ ವೇಳೆಯಷ್ಟೇ ವಿಚಾರ ಇಲ್ಲಿಗೆ ಗೊತ್ತಾಗಿದೆ.

ಕಂಪೆನಿಯ ಗೆಸ್ಟ್ ಹೌಸ್‌ನಲ್ಲಿ ಅವರು ಕೃತ್ಯವೆಸಗಿಕೊಂಡಿದ್ದೆಂದು ಗೊತ್ತಾಗಿದೆ. ಸಂಗಡಿಗರ ಜೊತೆ ಬುಧವಾರ ಮಧ್ಯಾಹ್ನದವರೆಗೂ ಮಾಮೂಲಾಗಿ ಬೆರೆತಿದ್ದ ಅವರು ಬಳಿಕ ನಿಗೂಢ ನಾಪತ್ತೆಯಾಗಿದ್ದರೆಂದು ಹೇಳಲಾಗಿದೆ. ಆರ್ಥಿಕ ವ್ಯವಹಾರವೊಂದರಲ್ಲಿ ನಷ್ಟ ಉಂಟಾಗಿರುವುದರಿಂದ ಅವರು ಕೃತ್ಯವೆಸಗಿಕೊಂಡಿರಬಹುದು ಎಂದು ಊರವರು ಶಂಕೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸುಜಿತ್ ಅವರು ಮನೆಗೂ ಸಂದೇಶ ಕಳಿಸಿದ್ದರೆಂದು ತಿಳಿದುಬಂದಿದೆ.

ಕಿರಿಯ ಪುತ್ರ, ಅವಿವಾಹಿತರಾಗಿದ್ದ ಸುಜಿತ್ ಅಕ್ಕನ ಮದುವೆಗೆ ಬಂದವರು 15 ದಿನಗಳ ಹಿಂದಷ್ಟೇ ಬಳ್ಳಾರಿಗೆ ಉದ್ಯೋಗಕ್ಕೆ ಮರಳಿದ್ದರು. ಎರಡು‌ ವರ್ಷಗಳ ಹಿಂದಷ್ಟೇ ಸುಜಿತ್ ಕುಮಾರ್ ಬಳ್ಳಾರಿಯ ಜಿಂದಾಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ವಾಲಿಬಾಲ್ ಆಟಗಾರರಾಗಿದ್ದ ಅವರು ಇದೀಗ ಅವರು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಸಂದೇಹಗಳಿಗೆ ಕಾರಣವಾಗಿದೆ.

ಘಟನೆಯ ವಿವರ ತಿಳಿಯುತ್ತಿದ್ದಂತೆ ಶಿರ್ಲಾಲಿನ ಅವರ ಕುಟುಂಬ ಬಂಧುಗಳು ನಾಲ್ಕು ಮಂದಿ ಬಳ್ಳಾರಿಗೆ ಹೋಗಿದ್ದು, ಮೃತದೇಹವನ್ನು ಊರಿಗೆ ತರುವ ನಿರೀಕ್ಷೆಯಿದೆ.

- Advertisement -

Related news

error: Content is protected !!