Friday, June 5, 2026
spot_imgspot_img
spot_imgspot_img

ಬೆಳ್ತಂಗಡಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಮೃತ್ಯು

- Advertisement -
- Advertisement -

ಬೆಳ್ತಂಗಡಿ: ಲಾಯಿಲದಲ್ಲಿ ಹದಿನೈದು ದಿನಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ವ್ಯಕ್ತಿಯನ್ನು ಲಾಯಿಲ ನಿವಾಸಿ ಪ್ರಮೋದ್ ಭೈರ(38) ಎಂದು ಗುರುತಿಸಲಾಗಿದೆ.

driving

ಪುತ್ರಬೈಲು ಸಮೀಪ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಎಪ್ರಿಲ್ 9ರಂದು ನಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಪ್ರಮೋದ್ ಬೈರ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಮೋದ್ ಬೈರ ಬೆಳ್ತಂಗಡಿ ಎಪಿಎಂಸಿ ಸದಸ್ಯರಾದ ಈಶ್ವರ ಬೈರ ಅವರ ಪುತ್ರರಾಗಿದ್ದಾರೆ.

- Advertisement -

Related news

error: Content is protected !!