Tuesday, June 9, 2026
spot_imgspot_img
spot_imgspot_img

ಮತಾಂತರಕ್ಕೆ ಒತ್ತಾಯ, ಮಾನಸಿಕ ಕಿರುಕುಳ ಆರೋಪ; ವಿಪ್ರೊ ಅಧಿಕಾರಿಯ ವಿರುದ್ಧ ಪೊಲೀಸ್ ದೂರು

- Advertisement -
- Advertisement -

ಮತಾಂತರಕ್ಕೆ ಬಲವಂತ ಆರೋಪ | ವಿಪ್ರೋದ ಮಹಿಳಾಅಧಿಕಾರಿಯ ವಿರುದ್ದ ಮಾಜಿ ಉದ್ಯೋಗಿ ದೂರುಪುಣೆ,ಜೂ.4: ಧಾರ್ಮಿಕ ಕಾರಣಗಳಿಗಾಗಿ ತನ್ನ ಮೇಲಾಧಿಕಾರಿಣಿಯು ತನಗೆ ಕಿರುಕುಳ ನೀಡಿದ್ದು, ಈ ಕಾರಣದಿಂದಾಗಿ ತಾನು ಉದ್ಯೋಗವನ್ನು ತೊರೆಯಬೇಕಾಯಿತೆಂದು ವಿಪ್ರೊದ ಪುಣೆ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು. ಆಪಾದಿಸಿದ್ದಾರೆ.

ಈ ಬಗ್ಗೆ ಮಹಿಳೆಯು, ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳಾ ಮೇಲಾಧಿಕಾರಿಯ ವಿರುದ್ಧ ಪೊಲೀಸರಿಗೆ ಹಾಗೂ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ವಿಪ್ರೊ ಸಂಸ್ಥೆಯ ವಕ್ತಾರರೊಬ್ಬರು ಹೇಳಿಕೆ ನೀಡಿ, ಸಂಬಂಧಪಟ್ಟ ಇಲಾಖೆಗಳ ಜೊತೆ ತಾವು ಸಹಕರಿಸುತ್ತಿದ್ದು, ಪುಣೆ ಪೊಲೀಸರಿಗೆ ಎಲ್ಲಾ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಒದಗಿಸಿರುವುದಾಗಿ ತಿಳಿಸಿದ್ದಾರೆ.

ಇಸ್ಲಾಂಗೆ ಮತಾಂತರವಾಗುವಂತೆ ಹಾಗೂ ಅದರ ಆಚರಣೆಗಳನ್ನು ಅನುಸರಿಸುವಂತೆ ತನ್ನ ಮೇಲೆ ನಿರಂತರವಾಗಿ ಮಾನಸಿಕ ಒತ್ತಡ ಹೇರಲಾಗುತ್ತಿತ್ತು ಎಂದು ಮಹಿಳೆ ದೂರಿನಲ್ಲಿ ಆಪಾದಿಸಿದ್ದಾರೆ.ತಾನು ಇದನ್ನು ಪ್ರತಿಭಟಿಸಿದಾಗ, ತನ್ನ ಮೇಲೆ ಕಿರುಕುಳ ಹೆಚ್ಚಾಯಿತಲ್ಲದೆ, ಮ್ಯಾನೇಜರ್ ಅವರು ತನ್ನನ್ನು ಕೆಲಸದಿಂದ ಕಿತ್ತುಹಾಕುವ ಬೆದರಿಕೆ ಹಾಕಿದರೆಂದು ಆಕೆ ಆರೋಪಿಸಿದ್ದಾರೆ. ಒತ್ತಡ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ತಾನು ಉದ್ಯೋಗ ತೊರೆದಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!