- Advertisement -
- Advertisement -



ಬೆಳ್ತಂಗಡಿ: ಮಡಂತ್ಯಾರು ಜ್ಯುವೆಲ್ಲರಿ ಶಾಪ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು ಸುಮಾರು ರೂ. 4,40,000 ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಬೆಳ್ತಂಗಡಿ ಮಡಂತ್ಯಾರು ನಿವಾಸಿ ರಾಜೇಶ್ (43) ಅವರ ದೂರಿನಂತೆ, ನ 16 ರಂದು ಸಂಜೆ ತಮ್ಮ ಮಾಲಕತ್ವದ ಜ್ಯುವೆಲ್ಲರಿ ಶಾಪ್‌ನಲ್ಲಿ ಇದ್ದಾಗ, ಆಭರಣ ಖರೀದಿಗೆಂದು ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು, ಅವರ ಗಮನಕ್ಕೆ ಬಾರದಂತೆ ಅಂದಾಜು 35 ಗ್ರಾಂ ತೂಕವಿರುವ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.ಮರುದಿನ ಬೆಳಿಗ್ಗೆ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಜೋಡಿಸುವಾಗ ಕಳವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 92/2026, ಕಲಂ 303(2) ಜೊತೆ 3(5) ಬಿ.ಎನ್.ಎಸ್ – 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -








