- Advertisement -
- Advertisement -





ಬೆಳ್ತಂಗಡಿ; ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ನಾಲ್ಕೂರು ನಿವಾಸಿ ಜೆರಾಲ್ಡ್ ರೋಶನ್ ಕೋರ್ಡೆರೋ ಎಂಬವರು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಚಾಲಕರಾಗಿದ್ದು, ಮೇ18 ರಂದು ಕರ್ತವ್ಯದಲ್ಲಿರುತ್ತಾ ಶಿವಮೊಗ್ಗದಿಂದ ಮಂಗಳೂರಿಗೆ ಬಸ್ ಚಲಾಯಿಸಿಕೊಂಡು ಮಧ್ಯಾಹ್ನ ಸಮಯ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ತಲುಪಿದಾಗ, ಆರೋಪಿತನಾದ MH-13-DE-1764 ನೇ ನೋಂದಣಿಯ ಕಾರಿನ ಚಾಲಕ ಸೈಡ್ ಕೊಡುವ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ಬೈದಿರುತ್ತಾನೆ.
ಈ ವೇಳೆ ಆರೋಪಿಯೊಂದಿಗೆ ಇದ್ದ ಮತ್ತೋರ್ವ ವ್ಯಕ್ತಿಯು ದೂರುದಾರರಿಗೆ ಹಲ್ಲೆ ನಡೆಸಿರುತ್ತಾನೆ ಎಂಬುದಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರರ್ಜಿ ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -








