Wednesday, July 22, 2026
spot_imgspot_img
spot_imgspot_img

ಬೆಳ್ತಂಗಡಿ: ಹಣಕಾಸು ವಿಚಾರದಲ್ಲಿ ವ್ಯಕ್ತಿಗೆ ಹಲ್ಲೆ ; ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ವ್ಯಕ್ತಿಯೋರ್ವರಿಗೆ ಹಣಕಾಸು ವಿಚಾರಕ್ಕೆ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕೊಕ್ಕಡ ಗ್ರಾಮದ ಅಕ್ಷಯ್‌ (31) ಎಂಬವರು ನೀಡಿದ ದೂರಿನಂತೆ, ಅಕ್ಷಯ್‌ ಅವರು ಮಾರ್ಚ್‌ 29ರಂದು ರಾತ್ರಿ ಕೊಕ್ಕಡ ಎಂಬಲ್ಲಿನ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಲು ಕುಳಿತಿರುವಾಗ, ಅಲ್ಲಿಗೆ ಬಂದ ಯತೀಶ್‌ ಎಂಬಾತ ಹಣಕಾಸಿನ ವಿಷಯವಾಗಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಯತೀಶ್‌ನೊಂದಿಗೆ ಇದ್ದ ಆರೋಪಿಗಳಾದ ಯತೀಶ, ಧನುಷ್‌ ಭಂಡಾರಿ, ಶರತ್‌ ಭಂಡಾರಿ ಹಾಗೂ ಪ್ರವೀಣ್‌ ಕೂಡ ಸೇರಿಕೊಂಡು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 23/2026. ಕಲಂ: 352,115(2), 118(1), 351(2) R/W 3(5)ಬಿಎನ್ಎಸ್-2023ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!