


ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ KA21G0333 ಇನೋವಾ ಕಾರು ಸುಮಾರು ವರ್ಷದಿಂದ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಬಳಕೆಯಲ್ಲಿದ್ದು , ಇದು ಭಕ್ತಾದಿಗಳ ಕಾಣಿಕೆ ಹಣದಿಂದ ಖರೀದಿಸಿದ ಕಾರು ಆಗಿತ್ತು. ಹಾಗಾಗಿ ಇದನ್ನು ಪುನಃ ದೇವಾಲಯಕ್ಕೆ ಹಿಂದಿರುಗಿಸುವಂತೆ ಈ ಬಗ್ಗೆ ವಿಟಿವಿಯಲ್ಲಿ ವರದಿ ಭಿತ್ತರಿಸಲಾಗಿತ್ತು.
ವರದಿ ಬಳಿಕ ದೇವಾಲಯದ ಕಾರನ್ನು ಆಯುಕ್ತರು ದೇವಾಲಯಕ್ಕೆ ಹಿಂದಿರುಗಿಸಿ ದೇವಾಲಯದಲ್ಲಿರುವ ಇನ್ನೊಂದು KA21G6666 ಇನ್ನೋವಾ ಕಾರ್ ನ್ನು ತೆಗೆದುಕೊಂಡಿದ್ದರು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಮತ್ತೆ ವರದಿ ಪ್ರಕಟಿಸಲಾಗಿತ್ತು. ಬಳಿಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಲರವರ ಗಮನಕ್ಕೆ ತಂದಿರಿಸಲಾಗಿತ್ತು. ಮಾಧ್ಯಮದಲ್ಲಿ ಪ್ರಕಟವಾದ ವರದಿ ಆಧಾರದ ಮೇರೆಗೆ ಮಲ್ಲಿಕಾ ಪಕಲರವರು ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಹಾಗೂ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಮಾಧ್ಯಮ ವರದಿ ಮತ್ತು ಮಲ್ಲಿಕಾ ಪಕಳರವರವ ಸತತ ಪ್ರಯತ್ನದಿಂದ ಇದೀಗ ಈ ವಾಹನ ಈ ವಾಹನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹಿಂದಿರುಗಿದೆ. ಇದರಿಂದಾಗಿ ಕುಕ್ಕೆ ಸುಬ್ರಮಣ್ಯ ದೇವಾಲಯದ ಭಕ್ತಾದಿಗಳು, ಊರಿನ ಸಮಸ್ತ ನಾಗರಿಕರು ರಾಜ್ಯದಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ ರವರಿಗೆ ಧನ್ಯವಾದಗಳು ತಿಳಿಸಿದ್ದಾರೆ.








