Monday, June 15, 2026
spot_imgspot_img
spot_imgspot_img

ಬೆಳ್ತಂಗಡಿ: ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ಉಜಿರೆಯಲ್ಲಿರುವ ವಸತಿಗೃಹದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ರವರು ಆದೇಶ ನೀಡಿದ್ದಾರೆ.

ಆರೋಪಿಯನ್ನು ಚಿಕ್ಕಮಗಳೂರು ನಿವಾಸಿ ಬಾಳಪ್ಪ ಎಂ ಕಳ್ಳೊಳ್ಳಿ ಎಂದು ಗುರುತಿಸಲಾಗಿದೆ.

ದಿನಾಂಕ:1-03-2014 ರಂದು ಬೆಳ್ತಂಗಡಿ ಉಜಿರೆಯಲ್ಲಿರುವ ವಸತಿಗೃಹದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ: 126/2014, ಕಲಂ:302.201 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಪ್ರಕರಣದ ಆರೋಪಿ ಚಿಕ್ಕಮಗಳೂರು ನಿವಾಸಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರಾದ ಲಿಂಗಪ್ಪ ಪೂಜಾರಿ ರವರು ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಮಾನ್ಯ ಬೆಳ್ತಂಗಡಿ cj&jmfc ನ್ಯಾಯಾಲಯಕ್ಕೆ ದೋಷರೊಪಾಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.‌ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಅಳವಡಿಸಲಾದ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿ, ತನಿಖೆ ನಡೆಸಿದ ಆಗಿನ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅದೀಕ್ಷಕರಾಗಿದ್ದ ರಾಹುಲ್ ಕುಮಾರ್ ಶಹಪುರ್ ಐ.ಪಿ.ಎಸ್ ರವರು ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯ ಮಂಗಳೂರಿಗೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಜಗದೀಶ್ ರವರು ಆ.28.08.2025 ರಂದು ಆರೋಪಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನಿಗೆ IPC ಸೆಕ್ಷನ್‌ 302 ರಡಿಯಲ್ಲಿ – ಜೀವಾವಧಿ ಶಿಕ್ಷೆ + ರೂ.15,000/- ದಂಡ (ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು). IPC ಸೆಕ್ಷನ್‌ 201 ರಡಿಯಲ್ಲಿ– 2 ವರ್ಷಗಳ ಸರಳ ಜೈಲು + ರೂ.5,000/- ದಂಡ (ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲು) ವಿಧಿಸಿ ಅದೇಶಿಸಿದ್ದಾರೆ.

ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ಪಿ ನಾಯಕ್ ರವರು ವಾದ ಮಂಡಿಸಿರುತಾರೆ. ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ಎ.ಎಸ್.ಐ ಕಲೈಮಾರ್ ರವರು ಹಾಗೂ ನ್ಯಾಯಾಲಯ ಸಿಬ್ಬಂದಿಯಾಗಿ ಮಲ್ಲಿಕಾರ್ಜುನ್ (pc2293) ರವರು ಕರ್ತವ್ಯ ನಿರ್ವಹಿಸಿರುತ್ತಾರೆ.

- Advertisement -

Related news

error: Content is protected !!