Friday, May 3, 2024
spot_imgspot_img
spot_imgspot_img

ಹಾಗಲಕಾಯಿಯ ಉಪಯುಕ್ತವಾದ ಗುಣಗಳು

- Advertisement -G L Acharya panikkar
- Advertisement -

ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
ಹಾಗಲಕಾಯಿ ರಸವು ತನ್ನಲ್ಲಿ ಫೋಲೇಟ್, ಜಿಂಕ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ ಎ ‘ ಮತ್ತು ವಿಟಮಿನ್ ‘ ಸಿ ‘ ನಂತಹ ಹಲವಾರು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಆಹಾರದಲ್ಲಿ ನಾರಿನ ಅಂಶದ ಅತ್ಯುತ್ತಮ ಮೂಲ ಎಂದು ಗುರುತಿಸಿಕೊಂಡಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ಮಟ್ಟವನ್ನು ಇತರ ಯಾವುದೇ ತರಕಾರಿ ಮತ್ತು ಹಣ್ಣುಗಳಿಗಿಂತ ಎರಡು ಪಟ್ಟು ಹೆಚ್ಚಾಗಿ ಹೊಂದಿರುತ್ತದೆ .

- Advertisement -

Related news

error: Content is protected !!