Sunday, April 28, 2024
spot_imgspot_img
spot_imgspot_img

ದಾಳಿಂಬೆ ಹಣ್ಣಿನ ಉಪಯುಕ್ತ ಗುಣಗಳು

- Advertisement -G L Acharya panikkar
- Advertisement -

ದಾಳಿಂಬೆ ಕೇವಲ ರುಚಿಕರ ಹಣ್ಣು ಮಾತ್ರವಲ್ಲ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣು. ದಿನಕ್ಕೆ ಒಂದು ಕಪ್ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ, ಹೃದ್ರೋಗ, ಕ್ಯಾನ್ಸರ್​​ನಿಂದ ದೂರವಿರಬಹುದು.

ದಾಳಿಂಬೆ ಹಣ್ಣಿನಲ್ಲಿ ಸಕ್ಕರೆ ಅಂಶ ಇದೆ, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮಧುಮೇಹಿಗಳು ದಾಳಿಂಬೆ ಸೇವನೆಯಿಂದ ದೂರ ಸರಿಯುತ್ತಾರೆ. ಆದರೆ  ದಾಳಿಂಬೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹವನ್ನು ನಿಯಂತ್ರಿಸಬಹುದು. ಟೈಪ್ 2 ಮಧುಮೇಹ ಹೊಂದಿರುವವರು ದಾಳಿಂಬೆಯ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸೇವನೆಯು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ಇದು ಉಪಯುಕ್ತವಾಗಿದೆ. ಮಧುಮೇಹ ಇಲ್ಲದೇ ಇರುವವರು ದಿನನಿತ್ಯ ಒಂದು ಕಪ್​ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹದಿಂದ ದೂರವಿರಬಹುದು.
ದಾಳಿಂಬೆಯಲ್ಲಿನ ಫೈಬರ್ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೇ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಪೊಟ್ಯಾಶಿಯಮ್ ಅಧಿಕ ರಕ್ತದೊತ್ತಡವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಯಾಸ, ಸ್ನಾಯು ನೋವು ಮುಂತಾದ ಅಧಿಕ ರಕ್ತದ ಸಕ್ಕರೆಯ ಲಕ್ಷಣಗಳನ್ನು ಕಡಿಮೆ ಮಾಡಲು ದಾಳಿಂಬೆ ಸಹಾಯಕವಾಗಿದೆ.

- Advertisement -

Related news

error: Content is protected !!