Tuesday, June 23, 2026
spot_imgspot_img
spot_imgspot_img

ಮಳೆಗಾಲದಲ್ಲಿ ಶುಂಟಿ ಚಹಾದ ಉಪಯೋಗ

- Advertisement -
- Advertisement -

ಚಳಿಗಾಲ ಹಾಗೂ ಮಳೆಗಾಲದ ಚಳಿಗೆ ಶುಂಠಿ ಚಹಾ ಅತ್ಯುತ್ತಮವಾದದ್ದು. ಇದು ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಚಳಿಗಾಲದಲ್ಲಿ ಉಂಟಾಗುವ ಜ್ವರ, ನೆಗಡಿ, ತಲೆನೋವು, ಮೂಗು ಸೋರುವುದು, ವಾಕರಿಕೆ ಸಮಸ್ಯೆ, ಜೀರ್ಣಕ್ರಿಯೆಯ ತೊಂದರೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಅಂಗಡಿಯಲ್ಲಿ ದೊರೆಯುವ ಶುಂಠಿ ಮಿಶ್ರಿತ ಚಹಾ ಪುಡಿ ಬಳಸಬಹುದು. ಇಲ್ಲದೆ ಇದ್ದರೆ ಒಂದು ಟೀ ಚಮಚದಷ್ಟು ತಾಜಾ ಶುಂಠಿಯನ್ನು ತುರಿದು, 10 ನಿಮಿಷಗಳ ಕಾಲ ಒಂದು ಕಪ್ ನೀರಿನಲ್ಲಿ ಕುದಿಸಿ. ನಂತರ ಟೀ ಪುಡಿ ಸೇರಿಸಿ ಚಹಾ ತಯಾರಿಸಿ. ರುಚಿಗೆ ಸಕ್ಕರೆಯನ್ನು ಸೇರಿಸಬಹುದು. ಈ ಸಂಯೋಜನೆಯು ಅದ್ಭುತವಾದ ಪರಿಮಳ ಮತ್ತು ರುಚಿಯೊಂದಿಗೆ ಆರೋಗ್ಯವನ್ನು ಕಾಪಾಡುವುದು.
ಮುಂಜಾನೆಯ ಪ್ರಾರಂಭದಲ್ಲಿ ಶುಂಠಿ ಮಿಶ್ರಿತ ಕಾಫಿಯನ್ನು ಸೇವಿಸಬಹುದು. ಶುಂಠಿಯನ್ನು ಹೊಂದಿರುವ ಒಂದು ಕಪ್ ಕಾಫಿ  ದೇಹವನ್ನು ಚೈತನ್ಯ ಶೀಲವಾಗಿರಿಸುವುದರ ಜೊತೆಗೆ ಆರೋಗ್ಯ ವೃದ್ಧಿ ಮಾಡುವುದು. ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಶುಂಠಿಯನ್ನು ಗಣನೀಯವಾಗಿ ಸೇವಿಸುವುದು ಅದ್ಭುತವಾದ ಆಯ್ಕೆಯಾಗುವುದು.

- Advertisement -

Related news

error: Content is protected !!