Sunday, October 11, 2026
spot_imgspot_img
spot_imgspot_img

ಕೊಡಂಗಾಯಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: 220ಕ್ಕೂ ಅಧಿಕ ಮಂದಿಗೆ ತಪಾಸಣೆ

- Advertisement -
- Advertisement -

ವಿಟ್ಲ : ಮಾಜಿ ಸಚಿವ ಬಿ. ರಮಾನಾಥ ರೈ ಅವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೊಡಂಗಾಯಿಯಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ, ಟೈಲರಿಂಗ್ ಯಂತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರಗಳನ್ನು ವಿತರಿಸಿದರು. ಅವಶ್ಯ ಫೌಂಡೇಶನ್, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಕಂಕನಾಡಿ, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, ಬಿ. ರಮಾನಾಥ ರೈ ಹುಟ್ಟುಹಬ್ಬ ಆಚರಣಾ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ, ಬಿ. ರಮಾನಾಥ ರೈ ಅಭಿಮಾನಿ ಬಳಗ ವಿಟ್ಲ ಪಡ್ನೂರು ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿಲ್ಲಾ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಮಾನಾಥ ರೈ ಅವರ ಹುಟ್ಟುಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಮಾತನಾಡಿ, ರಮಾನಾಥ ರೈ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ಅವರ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಿದೆ ಎಂದರು.ಕಾರ್ಯಕ್ರಮದ ಸಂಯೋಜಕ ಬಿ. ಸಂದೇಶ್ ಶೆಟ್ಟಿ ಬಿಕ್ನಾಜೆ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಚರ್ಮರೋಗ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲುಗಳ ತಪಾಸಣೆ, ರಕ್ತದೊತ್ತಡ, ಮಧುಮೇಹ ಹಾಗೂ ಕಿವಿ, ಮೂಗು ಮತ್ತು ಗಂಟಲು ಸಂಬಂಧಿತ ಕಾಯಿಲೆಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.

ಸುಮಾರು 220ಕ್ಕೂ ಅಧಿಕ ಮಂದಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, 180ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.ವಿಟ್ಲ ಪಡ್ನೂರು ಗ್ರಾಮದ ಮೂವರು ಬಡ ಮಹಿಳೆಯರಿಗೆ ಉಚಿತ ಟೈಲರಿಂಗ್ ಯಂತ್ರಗಳನ್ನು ವಿತರಿಸಲಾಯಿತು. ಅಡಿಕೆ ಮತ್ತು ತೆಂಗಿನ ಮರ ಹತ್ತುವ 18 ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಉಚಿತ ಅಪಘಾತ ವಿಮೆ ಮಾಡಿಸಿಕೊಡಲಾಯಿತು. ಇದರ ವಿಮಾ ಮೊತ್ತ ಸುಮಾರು 15 ಲಕ್ಷ ರೂ. ಆಗಿದೆ.ಜೂನಿಯರ್ ವೈಟ್‌ಲಿಫ್ಟಿಂಗ್‌ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಬಿ. ಪ್ರಧಮ್ ರಾಘವ ಗೌಡ ಬನ ಹಾಗೂ ಬಯೋಟೆಕ್ನಾಲಜಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಬ್ಬಾಸ್ ಆಲಿ, ಚಂದ್ರಶೇಖರ್ ಭಂಡಾರಿ, ಸುದರ್ಶನ್ ಪಡಿಯಾರ್, ಚಂದ್ರಹಾಸ ಗೌಡ ಬನ, ಹಸೈನರ್ ತಾಳಿತ್ತನೂಜಿ, ಪವಿತ್ರ ಪೂಂಜ ಕೊಡಂಗೆ, ಎ.ಬಿ. ಅಬ್ದುಲ್ಲಾ, ಕೊಳ್ನಾಡು ಶೋಭಾ ರೈ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಕೌನ್ಸೆಲರ್ ವಿಜಯ ಶೆಟ್ಟಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಮಂತ್ ಶೆಟ್ಟಿ, ವೆಂಕಟರಮಣ ಭಟ್ ಮೂರ್ಖಜೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷೆ ಶ್ವೇತಾ ಆರ್.ಕೆ. ಹಾಗೂ ಕೆಎಂಸಿ ವೈದ್ಯಾಧಿಕಾರಿ ಡಾ. ಕೇಶವ ಉಪಸ್ಥಿತರಿದ್ದರು.

- Advertisement -

Related news

error: Content is protected !!