Monday, June 30, 2025
spot_imgspot_img
spot_imgspot_img

ಬೆಳಗ್ಗೆದ್ದ ಕೂಡಲೇ ಖಾಲಿ ಹೊಟ್ಟೆಗೆ, ವಾಕಿಂಗ್ ಮಾಡುವುದರಿಂದ ಸಿಗುವ ಪ್ರಯೋಜನಗಳು

- Advertisement -
- Advertisement -

ಆರೋಗ್ಯವು ಚೆನ್ನಾಗಿ ಇರಬೇಕು ಎಂದರೆ, ದೈಹಿಕ ಚಟುವಟಿಕೆಗಳಾದ, ನಿಯಮಿತವಾಗಿ ವ್ಯಾಯಾಮ, ವಾಕಿಂಗ್, ಜಾಗಿಂಗ್, ಯೋಗಾಭ್ಯಾಸ, ಸರಿಯಾದ ಆಹಾರ ಪದ್ಧತಿ ಹಾಗೂ ಜೀವನಶೈಲಿ, ಇವೆಲ್ಲಾವನ್ನು ಅಚ್ಚು ಕಟ್ಟಾಗಿ ಅನುಸರಿಸಬೇಕು. ಆದರೆ ಈ ಒತ್ತಡದ ಜೀವನಶೈಲಿಯಿಂದಾಗಿ, ಇವೆಲ್ಲಾವನ್ನೂ ಎಲ್ಲರಿಂದಲೂ ಮಾಡಲು ಆಗಲ್ಲ.

ಹೀಗಾಗಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ದೈಹಿಕವಾಗಿ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಫಿಟ್ನೆಸ್ ತಜ್ಞರು. ಅದರಲ್ಲೂ ಮುಂಜಾ ನೆಯ ಸಮಯದಲ್ಲಿ, ಬೇಗನೇ ಎದ್ದು ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತಾ ಹೋಗು ತ್ತದೆ.

ಬೆಳಗ್ಗೆದ್ದ ಕೂಡಲೇ ಖಾಲಿ ಹೊಟ್ಟೆಗೆ, ವಾಕಿಂಗ್ ಮಾಡುವುದರಿಂದ ಪ್ರಮುಖವಾಗಿ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಕೆ ಯಾಗುತ್ತದೆ, ಇದರಿಂದ ರಕ್ತನಾಳಗಳನ್ನು ಹಾನಿಗೊಳಿಸುವ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಕೂಡ ಕಡಿಮೆ ಯಾಗಿ, ದೇಹದ ರಕ್ತ ಸಂಚಾರವು ಕೂಡ ಇದರಿಂದ ಸಕಾರಾತ್ಮಕ ಪರಿಣಾಮಕ್ಕೆ ಒಳಗಾಗುತ್ತದೆ. ಇನ್ನು ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ಈಗಾಗೇ ಮಧುಮೇಹ ಕಾಯಿಲೆ ಯಿಂದ ಬಳಲುತ್ತಿರುವವರು, ಪ್ರತಿ ದಿನ ಬೆಳಗ್ಗಿನ ಸಮಯದಲ್ಲಿ ವಾಕಿಂಗ್ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.​

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್‌ ನಲ್ಲಿ ಪ್ರಕಟ ವಾದ ಸಂಶೋಧನೆಯ ಪ್ರಕಾರ, ಪ್ರತಿದಿನ ಬೆಳಗ್ಗಿನ ಸಮಯದಲ್ಲಿ ವಾಕಿಂಗ್ ಮಾಡುವುದರಿಂದ ಹೃದಯಕ್ಕೆ ಸಂಬಂ ಧಪಟ್ಟ ಸಮಸ್ಯೆ ಗಳಿಂದ ದೂರವಿರಬಹುದು ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಪ್ರಮುಖವಾಗಿ ವೃದ್ಧಾಪ್ಯದಲ್ಲಿ ಕಾಡುವ ಹೃದಯಾಘಾತ ಮತ್ತು ಪಾರ್ಶ್ವ ವಾಯುವಿನಂತಹ ತೊಂದರೆಯನ್ನು ತಡೆಯಬಹುದು.

ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು, ಬೆಳಗ್ಗಿನ ಸಮಯದಲ್ಲಿ ಎರಡು ಗಂಟೆಗಳ ಕಾಲ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಸಮಯದ ಅಭಾವದಿಂದ ಬೆಳಗ್ಗೆ ಎರಡು ಗಂಟೆ ಕಾಲ ನಡೆಯಲು ಆಗದೆ ಇದ್ದರೆ, ರಾತ್ರಿ ಊಟದ ಬಳಿಕವಾದರೂ ಸುಮಾರು 30 ನಿಮಿಷ ಗಳವರೆಗೆ ನಡೆಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಎರಡು ಗಂಟೆಗಳ ಕಾಲ, ವಾಕಿಂಗ್ ಅದು ಸುಮಾರು 15 ಸಾವಿರ ಹೆಜ್ಜೆಗಳಿಗೆ ಸಮಾನವಾಗಿ ರುವುದು. ಹೀಗಾಗಿ ಈ ಅಭ್ಯಾಸವನ್ನು ಮಾಡಿ ಕೊಳ್ಳುವುದರಿಂದ, ಆಗ ಸಂಪೂರ್ಣ ಆರೋಗ್ಯ ಸುಧಾರಣೆ ಆಗುವುದು ಜೊತೆಗೆ ದೇಹದ ತೂಕ ಕೂಡ ಇಳಿಸಲು ನೆರವಾ ಗುವುದು.

ಅಧಿಕ ರಕ್ತದೊತ್ತಡ ಎನ್ನುವುದು ಸೈಲೆಂಟ್ ಕಿಲ್ಲರ್ ಕಾಯಿಲೆ, ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದ್ರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಕಾಯಿಲೆ ಇದ್ದವರು, ವೈದ್ಯರು ನೀಡುವ ಮಾತ್ರೆಗಳ ಜೊತೆಗೆ, ಕಟ್ಟು ನಿಟ್ಟಿನ ಆಹಾರ ಪದ್ಧತಿ, ಪ್ರತಿದಿನ ಬೆಳಗ್ಗಿನ ಸಮಯದಲ್ಲಿ ಪ್ರತಿದಿನ ಅರ್ಧ ಗಂಟೆ ವಾಕಿಂಗ್, ವ್ಯಾಯಾಮ, ಸೈಕ್ಲಿಂಗ್ ಇಂತಹ ದೈಹಿಕ ಚಟುವಟಿಕೆ ಇರುವಂತಹ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

- Advertisement -

Related news

error: Content is protected !!