Sunday, June 7, 2026
spot_imgspot_img
spot_imgspot_img

ಅಂತರ್ಜಾತಿ ಪ್ರೇಮಿಗಳು ನಾಪತ್ತೆ: ಯುವಕನ ಸಹೋದರನ ಆಟೋಗೆ ಬೆಂಕಿ ಹಚ್ಚಿದ ಯುವತಿಯ ಪೋಷಕರು

- Advertisement -
- Advertisement -

ಅಂತರ್ಜಾತಿಯ ಯುವಕ ತಮ್ಮ ಮಗಳನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆಂದು ಕೋಪಗೊಂಡ ಯುವತಿಯ ಪೋಷಕರು ಯುವಕನ ಸಹೋದರನ ಆಟೋಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುರೇಶ್ ಕುಮಾರ್ ಎಂಬ ಯುವಕ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ್ದು, ಒಕ್ಕಲಿಗ ಸಮುದಾಯದ ಮೋನಿಕಾ ಎಂಬ ಯುವತಿಯನ್ನು ಪ್ರೀತಿಸಿದ್ದರು ಎನ್ನಲಾಗಿದೆ. ಯುವತಿಯ ಎದರು ಮನೆಯಲ್ಲಿಯೇ ಇದ್ದ ಸುರೇಶ್ ಕುಮಾರ್ ಮತ್ತು ಯುವತಿ ಮೋನಿಕಾ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಜಾತಿಗೆ ಹೆದರಿದ ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಅಂತರ್ಜಾತಿಯ ಯುವಕ ತನ್ನ ಮಗಳನ್ನು ಕರೆದೊಯ್ದಿದ್ದಾನೆಂದು ಕೋಪಗೊಂಡ ಯುವತಿಯ ಪೋಷಕರು ಯುವಕನ ಸಹೋದರನ ಆಟೋಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಯುವತಿ ಕಾಣೆಯಾಗಿದ್ದಾಳೆಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!