Friday, May 17, 2024
spot_imgspot_img
spot_imgspot_img

ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು ಅ31: ಬೆಂಗಳೂರಿನಲ್ಲಿ ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್​ ಒಬ್ಬನನ್ನು ಬಂಧಿಸಲಾಗಿದೆ.


ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಸಾರ್ಥಕ್ ಆರ್ಯ ಎಂಬ ಟೆಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫಾರಿನರ್ಸ್ ಪೋಸ್ಟ್ ಮೂಲಕ ಬೆಂಗಳೂರಿಗೆ ಈತ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಅದನ್ನು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ನಿಗಾ ಇಟ್ಟಿತ್ತು. ಇತ್ತೀಚಿಗೆ ಬೆಲ್ಜಿಯಂನಿಂದ ಬೆಂಗಳೂರಿಗೆ ಬಂದ ಕೊರಿಯರ್ ಟ್ರ್ಯಾಕ್ ಮಾಡಿ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ಮಾಡಲಾಗಿತ್ತು.

ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪೊಲೀಸರು ಆ ಕೊರಿಯರ್ ಅನ್ನು ಪರಿಶೀಲನೆ ಮಾಡಿದ್ದರು. ಆಗ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್​ಎಸ್​ಆರ್ ಲೇಔಟ್​ನ ಟೆಕ್ಕಿ ಸಾರ್ಥಕ್ ಆರ್ಯ ಎಂಬಾತನ ಮನೆ ಶೋಧ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಸಿಬ್ಬಂದಿಗೆ ಆತನ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿತ್ತು. ಟೆಕ್ಕಿಯ ಮನೆಯಲ್ಲಿ 4.99 ಗ್ರಾಂ LSD, MH ಸೀರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, OCB ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100 ml ಕೆಮಿಕಲ್ ಅಯಿಲ್ ಜಪ್ತಿ ಮಾಡಲಾಗಿದೆ.

- Advertisement -

Related news

error: Content is protected !!