Saturday, June 20, 2026
spot_imgspot_img
spot_imgspot_img

ಊಟದ ವಿಚಾರಕ್ಕೆ ಜಗಳ: ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ!

- Advertisement -
- Advertisement -

ಬೆಂಗಳೂರು: ಊಟದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಸೀಮ್ ಅಲಿಯಾಸ್ ಆಸೀಫ್ (19) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಕಬಾಬ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಸೀಮ್ ಕಳೆದ 16ರಂದು ರಾತ್ರಿ ಊಟದ ವಿಚಾರವಾಗಿ ಸ್ನೇಹಿತನ ಜತೆ ಜಗಳವಾಡಿಕೊಂಡಿದ್ದ. ಬಿ.ಚನ್ನಸಂದ್ರದ ಕಾರ್ತಿಕ್ ಬಾರ್ ಬಳಿ ಅಂದು ಗಾಜಿನ ಚೂರಿನಿಂದ ನಸೀಮ್ ಹೊಟ್ಟೆಗೆ ಚುಚ್ಚಿ ಸ್ನೇಹಿತ ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ನಸೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಬಗ್ಗೆ ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!