




ಬೆಂಗಳೂರು: ಹೈಟೆನ್ಸನ್ ವೈರ್‌ಕಂಬದ ಮೇಲೆ ಕುಳಿತಿದ್ದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ ವಿದೇಶಿ ಗಿಳಿಯನ್ನು ರಕ್ಷಣೆ ಮಾಡಲು ಹೋದ ಯುವಕನಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಆತ ಮೃತಪಟ್ಟ ಘಟನೆ ಗಿರಿನಗರದಲ್ಲಿ ನಡೆದಿದೆ. ನಾಗಮಂಗಲ ಮೂಲದ ಅರುಣ್ ಕು ಮಾರ್ (32) ಮೃತ ದುರ್ದೈವಿ.
ಅರುಣ್ ಕುಮಾರ್ ಕಳೆದ ಕೆಲವು ವರ್ಷ ಗಳಿಂದ ಗಿರಿನಗರದ ವೀರಭದ್ರ ನಗರದಲ್ಲಿರುವ ತಮ್ಮ ಸಂಬಂಧಿ ಕರ ಅಂಗಡಿ ಯೊಂದ ರಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಂಬಂಧಿ ಲಲಿತಾ ಅಪಾರ್ಟ್‌ಮೆಂಟ್‌ನಲ್ಲಿ ಬೆಲೆ ಬಾಳುವ ವಿದೇಶಿ ಗಿಳಿ(ಬ್ಲೂ ಯೆಲ್ಲೋ ಮಕಾವೊ ಪ್ಯಾರೋಟ್)ಯೊಂದನ್ನು ಸಾಕಿದ್ದರು. ಅಪಾರ್ಟಮೆಂಟ್ ಪಕ್ಕದಲ್ಲೇ ಗಿಳಿ ಆಗಾಗ ಹಾರಾಟ ನಡೆಸುತ್ತಿತ್ತು. ಶುಕ್ರವಾರ ಬೆಳಗ್ಗೆ ಇವರ ಅಪಾರ್ಟ್‌ಮೆಂಟ್ ಒಳಭಾಗದಲ್ಲಿ ರುವ ಹೈಟೆನಂನ್ ವೈರ್ ಕಂಬದ ಮೇಲೆ ಗಿಳಿ ಹತ್ತಿ ಕುಳಿತಿತ್ತು. ಇದನ್ನು ಕಂಡ ಅರುಣ್ ಕುಮಾರ್, ಹೈಟೆನ್ನನ್ ವೈರ್‌ನಿಂದ ವಿದ್ಯುತ್ ಪ್ರವಹಿಸಿ ಗಿಳಿ ಸಾವನ್ನಪ್ಪಬಹುದು ಎಂದುಕೊಂಡು ಅದರ ರಕ್ಷಣೆಗೆ ಮುಂದಾಗಿದ್ದರು. ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಟ್ಟಿಗೆ ಸೇರಿಸಿ ಗಿಳಿಯನ್ನು ಅಲ್ಲಿಂದ ಓಡಿಸಲು ಯತ್ನಿಸಿದ್ದರು.
ಆ ಸಂದರ್ಭದಲ್ಲಿ 66 ಸಾವಿರ ಕೆವಿ ವಿದ್ಯುತ್ ವೈರ್‌ನಿಂದ ಅರುಣ್‌ಗೆ ಶಾಕ್ ಹೊಡೆದು ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದರು. ವಿದ್ಯುತ್ ಶಾಕ್‌ನಿಂದ ಗಾಯ ಗೊಂಡ ಅರುಣ್‌ರನ್ನು ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಮಾರ್ಗಮಧ್ಯೆ ಅರುಣ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.








