


ಜೈ ತುಳುನಾಡ್ (ರಿ.) ಬೆಂಗಳೂರು ಇದರ ಆಶ್ರಯದಲ್ಲಿ ತುಳುನಾಡ ಆಟಿ ಕಾರ್ಯಕ್ರಮವು ಆಗಸ್ಟ್ 4 ನೇ ಗುರುವಾರ ಬೆಂಗಳೂರಿನ ಬಿಳೇಕಹಳ್ಳಿ ಮುಲ್ಕಿ ಸಂದರ ರಾಮ ಶೆಟ್ಟಿ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ.

ಬೆಳಗ್ಗೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ತುಳು ಭಜನೆ, ಸಾಂಸ್ಕ್ರತಿಕ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಜರಗುವ ಈ ಕಾರ್ಯಕ್ರಮದಲ್ಲಿ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಮಕ್ಕಳಿಗೆ ಲಿಂಬೆ ಚಮಚ ಓಟ, ನಾಣ್ಯ ಹುಡುಕುವುದು, ಬಕೆಟ್‌ಗೆ ಬಾಲ್ ಹಾಕುವುದು, ತುಳುನಾಡಿನ ತಿಂಡಿ ತಿನಿಸುಗಳ ಹೆಸರು ಸಂಗ್ರಹ, ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಮಹಿಳೆಯರಿಗೆ ಲಿಂಬೆ ಚಮಚ ಓಟ, ಸಂಗೀತ ಕುರ್ಚಿ, ಸೂಜಿಗೆ ನೂಲು ಹಾಕುವುದು, ಹಗ್ಗ ಜಗ್ಗಾಟ, ಒಂದು ನಿಮಿಷದಲ್ಲಿ ತುಳು ಸಿನಿಮಾದ ಹೆಸರು ಬರೆಯುವುದು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಪುರುಷರಿಗೆ ಗೋಣಿ ಚೀಲ ಓಟ, ಹಗ್ಗ ಜಗ್ಗಾಟ, ಕಾಲಿಗೆ ಬಲೂನ್ ಕಟ್ಟಿ ಒಡೆಯುವುದು, ನಿಧಿ ಸಂಗ್ರಹ, ಚಿತ್ರಗಳನ್ನು ನೋಡಿ ತುಳುವಿನಲ್ಲಿ ಅವುಗಳ ಹೆಸರು ಬರೆಯುವುದು ಮುಂತಾದ ಸ್ಪೆರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ 7 ಗಂಟೆ ಗಂಟೆಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 8105117639, 9686211463, 7899590181









