Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಮಗುವಿಗೆ ವಿಷವುಣಿಸಿದ ತಂದೆ!

- Advertisement -
- Advertisement -

ಬೆಂಗಳೂರು: ಮಗುವಿಗೆ ಜನ್ಮ ಸಂಬಂಧಿ ಕಾಯಿಲೆಯಿದೆ ಎಂದು ಸ್ವಂತ ತಂದೆಯೇ ವಿಷವುಣಿಸಿರುವ ಘಟನೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಹೂತಾಂಡಹಳ್ಳಿ ನಿವಾಸಿ ಮುನಿಕೃಷ್ಣ ಎಂಬಾತ 2 ವರ್ಷದ ಮಗುವನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಮುನಿಕೃಷ್ಣ, ಮಗುವಿಗೆ ವಿಷವುಣಿಸಿ ಬಳಿಕ ಬಾಯಿ ತೊಳೆಯುತ್ತಿದ್ದು, ತಕ್ಷಣ ಮಗುವಿನ ತಾಯಿ ಮತ್ತು ಅಜ್ಜಿ ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿತ್ತು. ಡಿಸೆಂಬರ್ 23 ರಂದು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ಬಳಿಕ ಮುನಿಕೃಷ್ಣನನ್ನು ವಿಚಾರಿಸಿದಾಗ, ಮಗುವಿಗೆ ಜನ್ಮ ಸಂಬಂಧಿ ಖಾಯಿಲೆ ಇದೆ, ಮದ್ದು ಮಾಡಲು ಹಣವಿಲ್ಲದ ಕಾರಣ ವಿಷ ಉಣಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಸಿದ್ದಾಪುರ ಠಾಣೆಗೆ ಮಗುವಿನ ತಾಯಿ ದೂರು ನೀಡಿದ್ದಾಳೆ.

- Advertisement -

Related news

error: Content is protected !!