Thursday, October 22, 2026
spot_imgspot_img
spot_imgspot_img

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ – ಏಕರೂಪ ದರಕ್ಕೆ ಸರ್ಕಾರ ಚಿಂತನೆ

- Advertisement -
- Advertisement -

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದಲ್ಲಿ ಚಿಕಿತ್ಸಾ ದರ ಪಟ್ಟಿ ಪ್ರಕಟಿಸುವುದು ಕಡ್ಡಾಯವಾಗಿದ್ದು, ಏಕರೂಪದ ಚಿಕಿತ್ಸಾ ದರ ನಿಗದಿಪಡಿಸುವ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಚಿಕಿತ್ಸೆಗೆ ಬೇರೆ ಬೇರೆ ದರ ವಿಧಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಅನುಕೂಲವಾಗುವಂತೆ ಚಿಕಿತ್ಸಾ ವೆಚ್ಚದಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಚಿಕಿತ್ಸೆ ಆರಂಭಿಸುವ ಮುನ್ನವೇ ಅದರ ವೆಚ್ಚದ ಬಗ್ಗೆ ಮಾಹಿತಿ ಸಿಗಬೇಕು ಹಾಗೂ ಆಸ್ಪತ್ರೆಗಳ ಬಿಲ್‌ಗಳ ಬಗ್ಗೆ ರೋಗಿಗಳಿಗೆ ಸ್ಪಷ್ಟತೆ ಇರಬೇಕು ಎಂಬುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಯು.ಟಿ ಖಾದರ್‌, ಅಂತಾರಾಷ್ಟ್ರೀಯ ಕಂಪನಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಣ ಹೂಡಿಕೆ ನಿಲ್ಲಿಸಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯಗೊಳಿಸಬೇಕು. ಪ್ರಮುಖ ದರ ಪಟ್ಟಿಯನ್ನು ವಿಭಿನ್ನ ಕಲರ್ ನಲ್ಲಿ ಪ್ರದರ್ಶನ ಮಾಡಬೇಕು. ಲೆಡ್ಜರ್‌ನಲ್ಲಿ ಎಲ್ಲಾ ದರ ಪಟ್ಟಿಯನ್ನು ಹಾಕಬೇಕು. ಪ್ರಮುಖ ಟ್ರೀಟ್ಮೆಂಟ್‌ಗಳ ದರಗಳನ್ನು ಪ್ರದರ್ಶನ ಮಾಡಬೇಕು. ಅದಕ್ಕಾಗಿ ಏಕರೂಪದ ದರ ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

ಇಂದು ಅಥವಾ ನಾಳೆ ಖಾಸಗಿ ಆಸ್ಪತ್ರೆ ಸಂಘದ ಜೊತೆ ಸಭೆ ನಡೆಸಲಿದ್ದೇವೆ. ಸಭೆಯ ಬಳಿಕ ಚಿಕಿತ್ಸಾ ದರ ಪಟ್ಟಿ ಕಡ್ಡಾಯಗೊಳಿಸಲು ದಿನಾಂಕ ಪ್ರಕಟ ಮಾಡಲಿದ್ದೇವೆ. ಪ್ರಮುಖ ಚಿಕಿತ್ಸಾ ದರ ಪಟ್ಟಿಯನ್ನು ಬೋರ್ಡ್‌ನಲ್ಲಿ ಪ್ರಕಟ ಮಾಡಬೇಕು. ಉಳಿದೆಲ್ಲ ಚಿಕಿತ್ಸಾ ದರವನ್ನ ಲೆಡ್ಜರ್‌ನಲ್ಲಿ ಬರೆದಿಡಬೇಕು. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!