- Advertisement -
- Advertisement -



ಬೆಂಗಳೂರು: ಗರ್ಭಿಣಿ ಬೆಕ್ಕನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪದ ಮೇಲೆ 9 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಬೆಂಗಳೂರಿನ ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪಾರ್ಟೆಂಟ್ ಆವರಣದಲ್ಲಿದ್ದ ಗರ್ಭಿಣಿ ಬೆಕ್ಕೊಂದನ್ನು ಕಿಡ್ನಾಪ್ ಮಾಡಿ ಬೇರೆಡೆಗೆ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಾಣಿ ಪ್ರಿಯರಾಗಿರುವ ಹರೀಶ್ ಎಂಬವರು ಎಚ್.ಎ.ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಣಿಗಳನ್ನು ಅಕ್ರಮವಾಗಿ ಸ್ಥಳಾಂತರ ಮಾಡುವುದು ಮತ್ತು ಹಿಂಸಿಸುವುದು ಅಪರಾಧವಾಗಿದೆ. ಹೀಗಾಗಿ ಬೆಕ್ಕನ್ನು ಸ್ಥಳಾಂತರಿಸಲು ಕಾರಣರಾದ ಅಪಾರ್ಟೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀರಾಮ್, ಸೆಕ್ಯುರಿಟಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಅನ್ವಯ ಪೊಲೀಸರು ಪ್ರಾಣಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
- Advertisement -








