




ಬೆಂಗಳೂರು: ಮದುವೆಯಾದ ಎಂಟು ತಿಂಗಳಲ್ಲೇ ಮಹಿಳೆಯೋರ್ವರು ಪತಿಗೆ ವೀಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.ಶಾರದಾ ಆತ್ಮಹತ್ಯೆಗೆ ಶರಣಾದ ಯುವತಿ. ಹಣಕ್ಕಾಗಿ ಪೀಡಿಸುತ್ತಿದ್ದ ಗಂಡನ ಕಿರುಕುಳದಿಂದ ನೊಂದಿದ್ದ ಪತ್ನಿ ಶಾರದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಶಾರದಾ ತನ್ನ ರೂಮಿನಲ್ಲಿ ನೇಣಿಗೆ ಶರಣಾಗುವ ಮೊದಲು ಮನೆಯ ಹಾಲ್ ನಲ್ಲಿದ್ದ ಗಂಡ ಮಹೇಶನಿಗೆ ವೀಡಿಯೋ ಕಾಲ್ ಮಾಡಿದ್ದಳು. ಆದರೂ ಆಕೆಯನ್ನು ಆತ ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಆತ್ಮಹತ್ಯೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಪೊಲೀಸರು ಸ್ಥಳ ಮಹಜರು ಸರಿಯಾಗಿ ನಡೆಸಿಲ್ಲ ಎಂದು ಮೃತ ಶಾರದ ಪೋಷಕರು, ಗೃಹ ಸಚಿವರಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಹಿನ್ನೆಲೆ ಪೊಲೀಸರು ಮತ್ತೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮಗಳ ಈ ಸ್ಥಿತಿಗೆ ಕಾರಣನಾದ ಮಹೇಶ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಾರದ ಪೋಷಕರು ಆಗ್ರಹಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








