Thursday, July 10, 2025
spot_imgspot_img
spot_imgspot_img

ಬೆಟ್ಟಿಂಗ್‌ ಆ್ಯಪ್ ಹಗರಣ ಪ್ರಕರಣ; 29 ಸೆಲೆಬ್ರಿಟಿಗಳ ವಿರುದ್ಧ ಇಡಿ ಕೇಸ್‌..!

- Advertisement -
- Advertisement -

ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟಿ ಪ್ರಣೀತಾ ಸುಭಾಷ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ.

ನಟ, ನಟಿಯರ ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯನ್ಸರ್, ಯುಟ್ಯೂಬರ್‌ಗಳ ವಿರುದ್ಧವೂ ಇಡಿ ಗುರುವಾರ ಪ್ರಕರಣ ದಾಖಲಿಸಿದೆ.

5 ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.

ED ದಾಖಲಿಸಿಕೊಂಡಿರುವ ದೂರಿನಲ್ಲಿ ಮೂವರು ಸ್ಟಾರ್‌ ನಟರೊಂದಿಗೆ 29 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಸಿರಿ ಹನುಮಂತ್, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರೀತು ಚೌಧರಿ, ಬಂದಾರು ಶೇಷಾಯನಿ ಸುಪ್ರೀತ, ಬೆಟ್ಟಿಂಗ್ ವೇದಿಕೆಗಳ ನಿರ್ವಾಹಕರು, ಕಿರಣ್ ಗೌಡ್, ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಜಯ್, ಸನ್ನಿ ಮತ್ತು ಸುಧೀರ್‌ ಹಾಗೂ ‘ಲೋಕಲ್ ಬಾಯ್ ನಾನಿ’ ಯೂಟ್ಯೂಬ್ ಚಾನೆಲ್‌ ವಿರುದ್ಧ ಕೇಸ್‌ ದಾಖಲಾಗಿದೆ.

ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್ ರಮ್ಮಿ, ಜೀತ್‌ವಿನ್, ಲೋಟಸ್‌-365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದರು. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಪ್ರಕರಣ ಕುರಿತು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಇನ್ನೂ ಕೆಲ ಎಫ್‌ಐಆರ್‌ಗಳನ್ನು ED ಕಲೆಹಾಕುತ್ತಿದ್ದು, ಶೀಘ್ರದಲ್ಲಿ ಇವರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ. ತನಿಖೆ ಪ್ರಗತಿಯಲ್ಲಿದ್ದು, ಈ ಆ್ಯಪ್‌ಗಳು ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕಲೆ ಹಾಕಲಾಗುತ್ತಿದೆ ಎಂದು ಇಡಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.

- Advertisement -

Related news

error: Content is protected !!