Monday, June 15, 2026
spot_imgspot_img
spot_imgspot_img

ಬೆಂಗಳೂರು : ಪತ್ನಿಯನ್ನು ಕೊಲೆ ಮಾಡಿ ವಿಮಾನದಲ್ಲಿ ಪರಾರಿಯಾಗಿದ್ದ ಪತಿ ಬಂಧನ

- Advertisement -
- Advertisement -

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೊದಲೇ ರೂಪಿಸಿದ್ದ ಸಂಚಿನಂತೆ ವಿಮಾನದಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಗಳೂರು ಸದ್ದು ಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರ ಪತ್ನಿ ನಾಝ್’ಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಸಿರ್ ಹುಸೇನ್ ಬಂಧಿತ ಆರೋಪಿಯಾಗಿದ್ದಾನೆ.

ಕೊಲೆಯಾದ ನಾಝ್, ಸಾಫ್ಟ್‌ವೇರ್‍ ಉದ್ಯೋ ಗಿ ಎಂದು ನಾಸಿರ್ ಹುಸೇನ್‌ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಪಶ್ಚಿಮ ಬಂಗಾಳ ಮೂಲದವನಾಗಿದ್ದು , ಕೊಲೆ ಮಾಡುವ ಮೊದಲೇ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ನಂತರ ಕೊಲೆ ಮಾಡಿ ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ನಂತರ ಟ್ಯಾಕ್ಸಿ ಚಾಲಕನಿಗೆ 4000 ರೂ. ಹಣ ಫೋನ್ ಪೇ ಮಾಡಿ 3500 ರೂ. ಹಣವನ್ನು ಮರಳಿ ಪಡೆದುಕೊಂಡಿದ್ದ.

ದೆಹಲಿ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಪತ್ನಿ ನಾಝ್‌ಳನ್ನು ಕೊಲೆ ಮಾಡಿರುವುದಾಗಿ ಆಕೆಯ ಸಹೋದರನಿಗೆ ಮೆಸೇಜ್ ಮಾಡಿ, “ನಿನ್ನ ತಂಗಿಯ ಅಕ್ರಮ ಸಂಬಂದಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಮೃತದೇಹವನ್ನು ತೆಗೆದುಕೊಳ್ಳಿ ” ಎಂದು ಹೇಳಿ ಮೊಬೈಲ್ ಆಫ್ ಮಾಡಿ ಪರಾರಿಯಾಗಿದ್ದ . ಈ ಸಂಬಂಧ ಪ್ರ ಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸುದ್ದ ಗುಂಟೆ ಪಾಳ್ಯ ಪೊಲೀಸರು ಮೊಬೈಲ್ ಜಾಡು ಹಿಡಿದು ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

- Advertisement -

Related news

error: Content is protected !!