- Advertisement -
- Advertisement -







ಕಾಪು : ಖಾಸಗಿ ಸರ್ವಿಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥದಲ್ಲಿ ನಡೆದಿದೆ.
ಬಸ್ಸಿನಲ್ಲಿದ್ದ ಓರ್ವ ಮಹಿಳೆಗೆ ಗಾಯಗೊಂಡ ಬಗ್ಗೆ ವರದಿಯಾಗಿದೆ
ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಬಸ್‌ನಲ್ಲಿ 6-7 ಮಂದಿ ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಮತ್ತು ಬಸ್ ಕೂಡಾ ನಿಧಾನವಾಗಿ ಸಂಚರಿಸುತ್ತಿದ್ದುದರಿಂದ ಹೆಚ್ಚಿನ ಅಪಾಯವುಂಟಾಗಲಿಲ್ಲ. ಸ್ಥಳೀಯರು ಸೇರಿ ಬಸ್‌ನಲ್ಲಿದ್ದವರಿಗೆ ಹೊರಗೆ ಬರಲು ಸಹಕರಿಸಿದರು.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -