- Advertisement -
- Advertisement -
ಕಾರ್ಕಳ: ಮನೆಗೆ ನುಗ್ಗಿ ಗೊದ್ರೆಜ್‌ನಲ್ಲಿ ಇಟ್ಟಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳವುಗೈದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ.
ಶಿರ್ಲಾಲು ಗ್ರಾಮದ ಲಕ್ಷ್ಮೀ ಎಂಬವರು ಬೆಳಗಿನ ವೇಳೆ, ಮನೆಗೆ ಬೀಗ ಹಾಕದೆ ತನ್ನ ಅತ್ತೆಯನ್ನು ಬೀಡಿ ಬ್ರಾಂಚ್‌ಗೆ ಬಿಟ್ಟು ಹೋಗಿ ವಾಪಾಸ್ ಮನೆಗೆ ಬಂದಿದ್ದಾರೆ. ಈ ನಡುವೆ ಕಳ್ಳರು ಮನೆಯ ಒಳಗೆ ಬಂದು ಗೊದ್ರೇಜ್ ಕಪಾಟಿನಲ್ಲಿ ಇಟ್ಟಿದ್ದ ಒಂದು ಮುಕ್ಕಾಲು ಪವನ್ ಚಿನ್ನದ ಪೆಂಡೆಂಟ್ ಚೈನ್ ಮತ್ತು 2 ಪವನ್‌ನ ಚಿನ್ನದ ಉಂಗುರ ಮತ್ತು ಅರ್ಧ ಪವನ್‌ನ ಚಿನ್ನದ ಕಿವಿಯೋಲೆ ಸೇರಿದಂತೆ ಒಟ್ಟು 2,00,000 ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -