Sunday, April 28, 2024
spot_imgspot_img
spot_imgspot_img

ಪ್ರಥಮ ಬಾರಿ ಶಾಸಕನಾಗಿ ಹತ್ತೇ ದಿನದಲ್ಲಿ ರಾಜಸ್ಥಾನದ ಸಿಎಂ ಆದ ಭಜನ್ ಲಾಲ್ ಶರ್ಮ

- Advertisement -G L Acharya panikkar
- Advertisement -

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದಾರೆ.ಮೊದಲ ಬಾರಿಯ ಶಾಸಕರಾಗಿ ಆಯ್ಕೆಯಾಗಿರುವ ಭಜನ್‌ಲಾಲ್ ಶರ್ಮ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಸರ್ಪ್ರೈಸ್ ನೀಡಿದೆ.

ಭಜನ್‌ಲಾಲ್ ಶರ್ಮ ಅವರು ರಾಜಸ್ಥಾನದ ಸಂಗಾನೇರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಶಾಸಕರಾಗಿ ಆಯ್ಕೆಯಾದ ಮೊದಲ ಬಾರಿಯೇ ಮುಖ್ಯಮಂತ್ರಿಯೂ ಆಯ್ಕೆಗೊಂಡಿದ್ದಾರೆ.

ಭರತ್‌ಪುರ ಮೂಲದ ಭಜನ್‌ಲಾಲ್ ಶರ್ಮ ಅವರು ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ನಾಲ್ಕು ಬಾರಿ ರಾಜಸ್ಥಾನದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಭಜನ್‌ಲಾಲ್ ಶರ್ಮ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.
ಬ್ರಾಹ್ಮಣರಿಗೆ ಮತ್ತು ರಜಪೂತರಿಗೆ ಸಾಮಾಜಿಕ ನ್ಯಾಯಕ್ಕಾಗಿ 2003ರಲ್ಲಿ ರಾಜಸ್ಥಾನದಲ್ಲಿ ಸ್ಥಾಪನೆಗೊಂಡ ಸಾಮಾಜಿಕ ನ್ಯಾಯ ಮಂಚ್ ಪಕ್ಷದಲ್ಲಿ ಭಾರತಪುರದ ನಾಡ್ಡಾಯಿಯಿಂದ ಬಿಜೆಪಿ ವಿರುದ್ಧ ಬಂಡಾಯವೆದ್ದು ಭಜನ್ ಲಾಲ್ ಶರ್ಮ ಅವರು ಸ್ಪರ್ಧಿಸಿದ್ದರು.

- Advertisement -

Related news

error: Content is protected !!