Sunday, May 19, 2024
spot_imgspot_img
spot_imgspot_img

ಕುಲಾಲ ಸಂಘ(ರಿ.)ವಿಟ್ಲ:ಭಜನಾ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ.

- Advertisement -G L Acharya panikkar
- Advertisement -

ಕುಲಾಲ ಸಂಘ (ರಿ.)ವಿಟ್ಲ ವತಿಯಿಂದ ನವರಾತ್ರಿ ಆಚರಣೆಯ ಪ್ರಯುಕ್ತ 3ನೆ ವರ್ಷದ ಭಜನಾ ಕಾರ್ಯಕ್ರಮವು ವಿಟ್ಲದ ಸಂಘದ ನಿವೇಶನ ದಲ್ಲಿ ಸ್ವಜಾತಿ ಬಾಂಧವರ ಕೂಡುವಿಕೆಯಲ್ಲಿ ಜರಗಿತು. ಕುಲಾಲ ಮಹಿಳಾ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಭಜನೆಯು ವಿಭಜನೆಯನ್ನು ದೂರ ಮಾಡಿ ಸಮಸ್ತ ಮನು ಕುಲಕ್ಕೆ ಒದಗಿದ ಸಂಕಷ್ಟಗಳನ್ನು ದೂರ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು.


ಆ ಬಳಿಕ ಕುಲಾಲ ಸಂಘದ ಮಹಾ ಸಭೆಯು ಜರಗಿ 2020-21 ಹಾಗೂ 2021-22ನೆ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ದಿವಾಕರ ಕೋಡಿ, ಅಧ್ಯಕ್ಷರಾಗಿ B.K ಬಾಬು ವಿಟ್ಲ ಉಪಾಧ್ಯಕ್ಷರುಗಳಾಗಿ ರಾಧಾಕೃಷ್ಣ ಎರುಂಬು ಮತ್ತು ನಾರಾಯಣ ಪಳೇರಿ ಕಾರ್ಯದರ್ಶಿಗಳಾಗಿ ರಮೇಶ ಕುಲಾಲ್ ನೆಕ್ಕರೆಕಾನ ಪುಣಚ ಜತೆ ಕಾರ್ಯದರ್ಶಿ ಗಳಾಗಿ ಅರುಣಾಕರ ಪೆರುವಾಜೆ, ಕೋಶಾಧಿಕಾರಿಗಳಾಗಿ ಅಚ್ಚುತ ಕಟ್ಟೆ, ಸಂಘಟನಾ ಕಾರ್ಯದರ್ಶಿಗಳಾಗಿ ನಾರಾಯಣ ಮೂಲ್ಯ ಪುಣಚ, ಕ್ರೀಡಾ ಕಾರ್ಯದರ್ಶಿಗಳಾಗಿ K.M ಪ್ರವೀಣ್ ಕುಲಾಲ್ ವಿಟ್ಲ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕಲಾರಸಿಕ ಸುರೇಶ್ ಕುಲಾಲ್ ಅಲ್ಲದೆ 15 ಮಂದಿ ಸದಸ್ಯರುಗಳಾಗಿ ರಮಾನಾಥ ವಿಟ್ಲ, ವೀರಪ್ಪ ಮೂಲ್ಯಪುಣಚ, ವಸಂತ ಎರುಂಬು, ಜಿನ್ನಪ್ಪ ವೀರಕಂಬ, ಜಗದೀಶ ಮಲೆತಡ್ಕ, ಬಾಬು ಮಾರ್ನೆಮಿಗುಡ್ಡೆ, ಪ್ರಕಾಶ ಕೋಡಿ, ರಘುರಾಮ ಪಳೇರಿ, ದಾಮೋದರ ರಂಗರಮಜಲು, ಕೃಷ್ಣಪ್ಪ ಪಳೇರಿ, ವಿಶ್ವನಾಥ ಕೋಡಿ, ಕೃಷ್ನಮೂಲ್ಯ ಮಣ್ಣಗುಳಿ, ಜಗದೀಶ ವಿಟ್ಲ, ಪೂವಪ್ಪ ಮೂಲ್ಯ ಕುಂಡಡ್ಕ, ಚೈತ್ರೇಶ್ ಕುಲಾಲ್ ರಂಗರಮಜಲು ಇವರನ್ನು ಆಯ್ಕೆ ಮಾಡಲಾಯಿತು.


ಹಾಗೆ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಸುಚಿತ್ರರಮನಾಥ ವಿಟ್ಲ, ಉಪಾಧ್ಯಕ್ಷರುಗಳಾಗಿ ಮೀನಾಕ್ಷಿ ನಾರಾಯಣ ಪುಣಚ ಮತ್ತು ಶ್ರುತಿಅರುಣಾಕರ ಪೆರುವಾಜೆ, ಕಾರ್ಯದರ್ಶಿಗಳಾಗಿ ಮಲ್ಲಿಕ ನಾರಾಯಣ ಊರಿಮಜಲು, ಜತೆ ಕಾರ್ಯದರ್ಶಿ ಗಳಾಗಿ ಉಷಾವಸಂತ್ ಎರುಂಬು ಕೋಶಾಧಿಕಾರಿಗಳಾಗಿ ಸರಸ್ವತಿ ಕಟ್ಟೆ ಸಂಘಟನಾ ಕಾರ್ಯದರ್ಶಿಗಳಾಗಿ ಶಾರದಾ ಮಾಮೇಶ್ವರ ಕ್ರೀಡಾ ಕಾರ್ಯದರ್ಶಿಗಳಾಗಿ ಗೀತಾ ಅಡ್ಯನಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಭವಾನಿ ಕಟ್ಟೆ ಅಲ್ಲದೆ 11 ಮಂದಿ ಸದಸ್ಯರುಗಳಾಗಿ ಮೋಹಿನಿ ಎಣ್ಣೆದಕಲ, ಹರಿಣಾಕ್ಷಿ ಕನ್ಯಾನ, ರೇವತಿ ವಿಟ್ಲ, ಪ್ರೇಮ ಕುಂಡಡ್ಕ, ಮಮತಾಜಗನ್ನಾಥ ಕಬ್ಬಿನಹಿತ್ಲು, ಅನಿತಾಕ್ಷಿ ಪಳೇರಿ, ವಾರಿಜಾಬಾಬು ಮೂಲ್ಯ, ಸುಜಾತಕೋಡಿ, ಗೀತಾಹೂವಯ್ಯ, ಪವಿತ್ರ ಸೇರಾಜೆ, ಗೀತಾ ಕಲಾರಸಿಕ ಇವರನ್ನು ಆಯ್ಕೆ ಮಾಡಲಾಯಿತು.

ಉಪಸ್ಥಿತರಿರುವ ಸದಸ್ಯರ ಮುಂದೆ 2019-20ರ ಸಾಲಿನ ಲೆಕ್ಕ ಪತ್ರ ಮಂಡಿಸಿ ದಾಖಲೆಗಳನ್ನು ನೂತನ ಕಾರ್ಯಕಾರಿ ಸಮಿತಿಗೆ ಹಸ್ತಾಂತರಿಸಲಾಯಿತು.ಗೌರವಾಧ್ಯಕ್ಷ ವೀರಪ್ಪಮೂಲ್ಯ ಪುಣಚ ಸ್ವಾಗತಿಸಿ, ಪ್ರಸ್ತುತ ವರ್ಷದ ಅಧ್ಯಕ್ಷರುಗಳು ಅನುಭವ ಗಳನ್ನು ಹಂಚಿದರು. ಕಾರ್ಯದರ್ಶಿಗಳು ವರದಿ ಮಂಡಿಸಿದರು.ಕೋಶಾಧಿಕಾರಿ ವರದಿಮಂಡಿಸಿದ ಈ ಸಭಾಕಾರ್ಯಕ್ರಮವನ್ನು ರಾಧಾಕೃಷ್ಣ ಎರುಂಬು ನಿರೂಪಿಸಿದರು.

- Advertisement -

Related news

error: Content is protected !!