Thursday, May 2, 2024
spot_imgspot_img
spot_imgspot_img

ಕೆಲಿಂಜ : ಶ್ರೀ ಉಳ್ಳಾಲ್ತಿ ಅಮ್ಮನವರ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾ‌ರ್ ಗುತ್ತಿನಿಂದ ಭಂಡಾರ ಹೊರಡುವ ಕಾರ್ಯಕ್ರಮ

- Advertisement -G L Acharya panikkar
- Advertisement -

ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ 14 ನೇ ಬುಧವಾರ ರಾತ್ರಿ ನಡೆಯಲಿದೆ. ಈ ಪ್ರಯುಕ್ತ ಫೆ.13 ನೇ ಮಂಗಳವಾರದಂದು ರಾತ್ರಿ ಶ್ರೀ ಉಳ್ಳಾಲ್ತಿ ಮಲರಾಯ ಮೂಲ ಭಂಡಾರ ಚಾವಡಿ ಬೆಂಞಣ್ತಿಮಾರ್ ಗುತ್ತಿನಿಂದ ಕೆಲಿಂಜ ಶ್ರೀ ಅಮ್ಮನವರ ಸನ್ನಿಧಾನಕ್ಕೆ ಭಂಡಾರ ಆಗಮನವಾಗಲಿದೆ.

ಫೆ.13 ರ ಮಂಗಳವಾರದಂದು ಬೆಳಿಗ್ಗೆ 8 ಗಂಟೆಗೆ ತಂತ್ರಿವರ್‍ಯರ ಆಗಮನ ಗಂಟೆ 9ಕ್ಕೆ ಪ್ರಾರ್ಥನೆ, ಬಿಂಬ ಶುದ್ಧಿ ನಡೆದು ಬಳಿಕ ಬೆಳಿಗ್ಗೆ 10 ಗಂಟೆಗೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂಡಳಿ ಬಡ್ಡಕಟ್ಟೆ ಬಂಟ್ವಾಳ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ 11 ಗಂಟೆಗೆ ಶ್ರೀ ದೇವಿ ಭಕ್ತ ವೃಂದ ನಡುವಳಚ್ಚಿಲು ಇವರಿಂದ ಭಜನಾ ಸೇವೆ ನಡೆಯಲಿದೆ.

ಮಧ್ಯಾಹ್ನ ಗಂಟೆ 12.30ಕ್ಕೆಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಮತ್ತು ಪರಿವಾರ ದೈವಗಳಿಗೆ ತಂಬಿಲಸೇವೆ, ಹೂವಿನ ಪೂಜೆ, ಕುಂಕುಮಾರ್ಚನೆ, ಕರ್ಪೂರಾರತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಸೇವೆ ನಡೆಯಲಿದೆ.

ಸಂಜೆ ಗಂಟೆ 5.30ರಿಂದ ಶ್ರೀ ಶಂಕರ್ ಮಾಸ್ಟರ್ ಬೋಳಂತೂರು ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 6.30ರಿಂದ : ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ, ಬರಿಮಾರು, ಹಾಗೂ ರಾತ್ರಿ ಗಂಟೆ 7.30ರಿಂದ ಭಜನ್ ಸಂಧ್ಯಾ – ಶ್ರೀ ರವಿರಾಜ್ ಶೆಟ್ಟಿ ಒಡಿಯೂರು ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ರಾತ್ರಿ ಗಂಟೆ 8.30ಕ್ಕೆ ದೈವದ ಪ್ರಸಾದ ರೂಪವಾಗಿ ಚಾವಡಿಯ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಸೇವೆ ನಡೆಯಲಿದೆ.

ರಾತ್ರಿ 8:45 ರಿಂದ ಕರಾವಳಿಯ ಪ್ರಸಿದ್ಧ ಹಿಮ್ಮೇಳ, ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಪ್ರಖ್ಯಾತ್‌ ಶೆಟ್ಟಿ ಅಳಿಕೆ ಇವರ ಭಾಗವತಿಕೆಯಲ್ಲಿ “ಕಾರ್ಣಿಕದ ಕಲ್ಲುರ್ಟಿ ಕಲ್ಕುಡೆರು” ಎಂಬ ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ನಂತರ ಶ್ರೀ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ ಇವರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಂಡಾರ ಹೊರಡಲಿದೆ.

- Advertisement -

Related news

error: Content is protected !!