- Advertisement -
- Advertisement -




ಭಟ್ಕಳ: ರಸ್ತೆಯಲ್ಲಿ ಹಸುವೊಂದು ಅಡ್ಡಬಂದ ಪರಿಣಾಮ ನಾಲ್ಕು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ಹಸು ಅಡ್ಡ ಬಂದಿದ್ದು, ಕಾರಿನ ಚಾಲಕ ಅದನ್ನು ತಪ್ಪಿಸಲು ಹೋಗಿ ಕಾರನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಕಾರು ಮೊದಲು ಗೂಡ್ಸ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಬಳಿಕ ಬೊಲೆರೊ ಪಿಕ್ಅಪ್, ಇನ್ನೊಂದು ಪಿಕ್‌ಅಪ್ ಗೆ ಡಿಕ್ಕಿ ಹೊಡೆದ ನಂತರ ವಾಹನಗಳ ವೇಗ ಸೂಚಿಸುವ ಸೈನ್ ಬೋರ್ಡ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಎಲ್ಲ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿ ಬಿದ್ದಿವೆ.
ಕಾರಿನಲ್ಲಿ ಕೇರಳದ ದಂಪತಿ ಜತೆಗೆ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೆ, ಗೂಡ್ಸ್ ಆಟೋ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
- Advertisement -








