Tuesday, March 2, 2021

ಟ್ಯಾಂಕರ್‌ಗೆ ಕಾರು ಡಿಕ್ಕಿ: 6 ಯುವಕರು ಸಾವು!

ಭೋಪಾಲ್: ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 6 ಯುವಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ತಲವಾಲಿ ಬಳಿ ನಡೆದಿದೆ.

ಮೃತರನ್ನು ರಿಶಿ ಪವಾರ್(19), ಸೂರಜ್(25), ಚಂದ್ರಭಾನ ರಘುವಂಶಿ(23), ಸೋನು ಜತ್(23), ಸುಮಿತ್ ಸಿಂಗ್(30) ಮತ್ತು ದೇವ್(28) ಎಂದು ಗುರುತಿಸಲಾಗಿದೆ. ಮೃತರು ಇಂದೋರ್‍ ನಿವಾಸಿಗಳಾಗಿದ್ದಾರೆ. ಈ ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ಲಸುದಿಯ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಾಣೆ ಮಾಡುವ ಟ್ಯಾಂಕರ್‍ಗೆ ಗುದ್ದಿದೆ. ಕಾರ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿದ್ದ ಕೆಲ ಯುವಕರ ದೇಹದ ಭಾಗಗಳು ಕಟ್ ಆಗಿವೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗಾಗಿ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಪೋಷಕರಿಗೆ ಮೃತದೇಹವನ್ನು ನೀಡುತ್ತೇವೆ. ಚಾಲಕ ನಿದ್ರೆ ಮಂಪರಿಗೆ ಜಾರಿರಬಹುದು ಅಥವಾ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

- Advertisement -

MOST POPULAR

HOT NEWS

Related news

error: Content is protected !!