Friday, October 23, 2026
spot_imgspot_img
spot_imgspot_img

ಮತ್ತೆ ಬರುತ್ತಿದೆ ಬಿಗ್ ಬಾಸ್!- ಪ್ರೋಮೋ ಶೂಟ್ ಫೋಟೊ ಹಂಚಿಕೊಂಡ ಕಿಚ್ಚ

- Advertisement -
- Advertisement -

ಬೆಂಗಳೂರು: ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್, ಈ ಬಾರಿ ಮಹಾಮಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಜನವರಿಗೆ ಮುಂದೂಡಲ್ಪಟ್ಟಿತ್ತು. ಆದರೆ ಜನವರಿ ಕೊನೆಯಾಗುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ ಎಂದು ಅಭಿಮಾನಿಗಳು ಬೇಸರ ಪಡುತ್ತಿದ್ದಾಗಲೇ ಇದೀಗ ನಿರೂಪಕ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಈ ಬಗ್ಗೆ ಪ್ರೋಮೋ ಶೂಟ್ ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟ್ ನಡೆಯುತ್ತಿದೆ. ಸದ್ಯದಲ್ಲಿಯೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿಬಾರಿ ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋ ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತದೆ. ಈ ಬಾರಿ ಕೂಡ ಅದೇ ಸೆಟ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಬಾರಿ ಸ್ಪರ್ಧಿಗಳಿಗೆ ಸಪ್ರೈಸ್ ನೀಡುವಂತಹ ಥೀಮ್‍ನಲ್ಲಿ ಮನೆಯನ್ನು ರೆಡಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಬಿಗ್‍ಬಾಸ್ ಪ್ರಸಾರವಾಗುವ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಕೊರೊನಾ ಆತಂಕದ ನಡುವೆಯೂ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಬಿಗ್‍ಬಾಸ್ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿವೆ.

- Advertisement -

Related news

error: Content is protected !!