Saturday, April 27, 2024
spot_imgspot_img
spot_imgspot_img

ಕೆಜಿಎಫ್-2 ನಲ್ಲಿ ಅನಂತ್ ನಾಗ್ ಬದಲಿಗೆ ಮತ್ತೋರ್ವ ಸ್ಟಾರ್ ನಟ

- Advertisement -G L Acharya panikkar
- Advertisement -

ಚಿತ್ರರಂಗದಲ್ಲಿ ಕೆಜಿಎಫ್-1 ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಇದೀಗ ಕೆಜಿಎಫ್-2 ನೋಡುವ ನಿರೀಕ್ಷೆಯಲ್ಲಿ ಸಿನಿಪ್ರೀಯರಿದ್ದಾರೆ. ಇಂದಿನಿಂದ ಮತ್ತೆ ಕೆಜಿಎಫ್-2 ಚಿತ್ರೀಕರಣ ಶುರುವಾಗಿದೆ. ಆದರೆ ಈ ನಡುವೆ ಚಿತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಕೆಜಿಎಫ್ ಚಾಪ್ಟರ್ ಒಂದರಲ್ಲಿ ನಟಿಸಿದ್ದ ಹಿರಿಯ ನಟ ಅನಂತ್ ನಾಗ್ ಬದಲಿಗೆ ಈ ಬಾರಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ.

ಆನಂದ್ ಇಂಗಳಗಿ ಪಾತ್ರವನ್ನು ನಟ ಅನಂತ್ ನಾಗ್ ನಿಭಾಯಿಸಿದ್ದರು. ಆದರೆ ಇದೀಗ ಆ ಪಾತ್ರದ ಜಾಗದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಕುಳಿತಿರುವ ಫೋಟೋವೊಂದು ಸಿಕ್ಕಿದೆ. ಹೀಗಾಗಿ ನಟ ಪ್ರಕಾಶ್ ರೈ ಕೆಜಿಎಫ್-2 ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

- Advertisement -

Related news

error: Content is protected !!